ಆರೋಪದ ನಡುವೆಯೂ BSY ಸರ್ಕಾದಿಂದ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ

By Web DeskFirst Published Aug 19, 2019, 6:28 PM IST
Highlights

ಸಿಎಂ ಬಿಎಸ್‍ವೈ ವರ್ಗಾವಣೆ ದಂಧೆಗೆ ತನ್ನ ಪುತ್ರನನ್ನೇ ಮುಂದೆ ಬಿಟ್ಟಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ 22 ಮಂದಿ  ಡಿವೈಎಸ್ ಪಿ ಅಧಿಕಾರಿಗಳನ್ನು ಟ್ರಾನ್ಸ್ ಫರ್ ಮಾಡಿದೆ.

ಬೆಂಗಳೂರು, [ಆ.19]: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ 22 ಮಂದಿ  ಡಿವೈಎಸ್ ಪಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಮೇಲೆ ಮೇಲಿಂದ ಮೇಲೆ ಅಧಿಕಾರಿಗಳ ವರ್ಗಾವಣೆ ನಡೆಯುತ್ತಲೇ ಇದ್ದು, ಇದರ ಕಮಿಷನ್ ದಂಧೆ ನಡೆಯುತ್ತಿದೆ ಎಂದು ಪ್ರತಿ ಪಕ್ಷಗಳು ಗಂಭೀರ ಆರೋಪ ಮಾಡಿವೆ.

ಆದರೂ ಇದ್ಯಾವುದಕ್ಕೂ ಕಿವಿಗೊಡ ಬಿಎಸ್ ವೈ ಸರ್ಕಾರ ಇಂದು [ಸೋಮವಾರ] 22 DYSPಗಳನ್ನು ಎತ್ತಂಗಡಿ ಮಾಡಿದೆ.  ಆ ಪಟ್ಟಿ ಈ ಕೆಳಗಿನಂತಿದೆ.

ಶ್ರೀನಿವಾಸ್ ಹೆಚ್, ಸಿದ್ದ ಲಿಂಗಪ್ಪ ಎಸ್ ಟಿ, ಸದಾನಂದ ಎ ತಿಪ್ಪಣ್ಣನವರ್, ಮುರಳಿ ಹೆಚ್ ಎಸ್, ಶಿವಶಂಕರ್ ಎಂ, ಬಶೀರ್ ಅಹ್ಮದ್ ಟಿ, ಪುಟ್ಟಮಾದಯ್ಯ, ಲಕ್ಷ್ಮಣ್ ನಾಯಕ್ ಇವರೆಲ್ಲರನ್ನು ರಾಜ್ಯ ಗುಪ್ತದಳಕ್ಕೆ ವರ್ಗಾವಣೆ ಮಾಡಲಾಗಿದೆ.

ರವಿಪ್ರಸಾದ್ , ನಾಗರಾಜ್ , ಕಾಶಿ ಇವರುಗಳನ್ನು ಸಿಸಿಬಿ ಎಸಿಪಿಗಳಾಗಿ ವರ್ಗಾವಣೆಯಾಗಿದ್ದಾರೆ. ಇನ್ನು ರವೀಂದ್ರ, ಧರ್ಮಪ್ಪ, ಮೊಹಮ್ಮದ್ ಹುಮಾಯೂನ್‌ , ರಮೇಶ್ ಕೆ ಎನ್ , ವೇಣುಗೋಪಾಲ್, ಮೋಹನ್ ಕುಮಾರ್ ಬಿಎಸ್ ಬಾಲರಾಜ್ ಸಿಐಡಿಗೆ ವರ್ಗಾವಣೆ.

ವರ್ಗಾವಣೆ ದಂಧೆ: ನಮ್ಮ ಸರ್ಕಾರ ವರ್ಗಾವಣೆ ದಂಧೆ ಮಾಡಿದೆ ಎಂದು ಬಿಪಿಯವರು ಹೇಳ್ತಿದ್ರು, ಈಗ ಬಿಜೆಪಿ ಸರ್ಕಾರ ಬಂದ ಮೇಲೆ ಯಲಹಂಕ ತಹಸೀಲ್ದಾರ್‌ ಪೋಸ್ಟ್‌ ಗೆ ಎಷ್ಟುವ್ಯವಹಾರ ಆಯ್ತು ಹೇಳಿ? ನಮಗೆ ವರ್ಗಾವಣೆ ಲೂಟಿ ಅಂತೀರಿ. ನೀವೇನು ಮಾಡ್ತಿದ್ದೀರಿ? ವರ್ಗಾವಣೆ ದಂದೆಗೆ ಯಡಿಯೂರಪ್ಪ ಸುಪುತ್ರನನ್ನೇ ಬಿಟ್ಡಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. 

click me!