ಬಿಇಓ, ಡಿಡಿಪಿಐಗಳನ್ನು ಪಾಠ ಮಾಡೋಕೆ ಕಳಿಸಿದ ಸರ್ಕಾರ!

By Suvarna Web DeskFirst Published Jul 17, 2017, 11:58 AM IST
Highlights

ಅನೇಕ ವರ್ಷಗಳಿಂದ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಹುದ್ದೆಗಳಲ್ಲಿ ಠಿಕಾಣಿ ಹೂಡಿದ್ದ ನೂರಾರು ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಸರ್ಕಾರ ಡಯಟ್ ಕಾಲೇಜುಗಳಿಗೆ ಪಾಠ ಮಾಡಲು ವಾಪಸ್ ಕಳಿಸಿದೆ.

ಬೆಂಗಳೂರು(ಜು.17): ಅನೇಕ ವರ್ಷಗಳಿಂದ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಹುದ್ದೆಗಳಲ್ಲಿ ಠಿಕಾಣಿ ಹೂಡಿದ್ದ ನೂರಾರು ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಸರ್ಕಾರ ಡಯಟ್ ಕಾಲೇಜುಗಳಿಗೆ ಪಾಠ ಮಾಡಲು ವಾಪಸ್ ಕಳಿಸಿದೆ.

ಹೌದು, ನೂರಾರು ಡಿಡಿಪಿಐ ಮತ್ತು ಬಿಇಓಗಳನ್ನು ವರ್ಗಾವಣೆ ಮಾಡಿರುವ ಸರ್ಕಾರ, ಕೆಲವರನ್ನು ತತ್ಸಮಾನ ವೃಂದಗಳಾದ ಡಯಟ್ ಕಾಲೇಜುಗಳ ಪ್ರಾಂಶುಪಾಲ ಹುದ್ದೆಗಳಿಗೆ ಮತ್ತು ಉಪನ್ಯಾಸಕ ಹುದ್ದೆಗಳಿಗೆ ವಾಪಸ್ ಕಳಿಸಿದೆ. ಅಲ್ಲದೆ, ಪ್ರಾಂಶುಪಾಲ ಮತ್ತು ಉಪನ್ಯಾಸಕ ಹುದ್ದೆ ಯಲ್ಲಿದ್ದ ಹಲವರನ್ನು ಡಿಡಿಪಿಐ, ಬಿಇಓಗಳ ಹುದ್ದೆಗಳಿಗೆ ನಿಯೋಜಿಸಿದೆ.

ಶನಿವಾರ ವರ್ಗಾವಣೆ ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು 15 ಡಿಡಿಪಿಐಗಳು ಮತ್ತು 141 ಬಿಇಓಗಳು ಸೇರಿದಂತೆ ತತ್ಸಮಾನ ವೃಂದದ ಒಟ್ಟು 183 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಆದೇಶದಲ್ಲಿ ಡಿಡಿಪಿಐ ಹುದ್ದೆಯಲ್ಲಿದ್ದ ಹತ್ತಾರು ಜನರನ್ನು ಡಯಟ್ ಕಾಲೇಜುಗಳ ಪ್ರಾಂಶುಪಾಲ ಹುದ್ದೆಗಳಿಗೆ, ಸುಮಾರು 75 ಕ್ಷೇತ್ರ ಶಿಕ್ಷಣಾ ಧಿಕಾರಿಗಳನ್ನು (ಬಿಇಓ) ಉಪನ್ಯಾಸಕ ಹುದ್ದೆಗಳಿಗೆ ಮರಳಿಸಿದೆ. ಇದವರ ಸ್ಥಾನಗಳಿಗೆ ಪ್ರಾಂಶುಪಾಲ, ಹಿರಿಯ ಉಪನ್ಯಾಸಕ ಹುದ್ದೆಗಳಲ್ಲಿದ್ದವರನು ವರ್ಗವಣೆ ಮೂಲಕ ನಿಯೋಜಿಸಿದೆ.

ಇದರೊಂದಿಗೆ ಹಲವು ವರ್ಷಗಳಿಂದ ಕೇವಲ ಆಡಳಿತಾತ್ಮಕ ಹುದ್ದೆಗಳಲ್ಲೇ ಠಿಕಾಣಿ ಹೂಡಿದ್ದ ಡಿಡಿಪಿಐ, ಬಿಇಓಗಳಿಗೆ ಚುರುಕು ಮುಟ್ಟಿಸಿದಂತಾಗಿದೆ. ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದಾಗಲೇ ಇಂತಹದ್ದೊಂದು ಪ್ರಸ್ತಾಪ ಸಿದ್ಧವಾಗಿತ್ತು.

 

click me!