‘ನಾನು ರಾಜೀನಾಮೆ ಕೊಟ್ರೂ ಸರ್ಕಾರಕ್ಕೆ ಏನಾಗಲ್ಲ’

Published : Jul 01, 2019, 03:57 PM IST
‘ನಾನು ರಾಜೀನಾಮೆ ಕೊಟ್ರೂ ಸರ್ಕಾರಕ್ಕೆ ಏನಾಗಲ್ಲ’

ಸಾರಾಂಶ

ರಾಜ್ಯ ರಾಜಕೀಯದಲ್ಲಿ ಆನಂದ್ ಸಿಂಗ್ ರಾಜೀನಾಮೆಯಿಂದ ಸಾಕಷ್ಟು ಪಲ್ಲಟವಾಗಿದ್ದು, ಈ ಬಗ್ಗೆ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಹಾಗಾದ್ರೆ ಈ ಬಗ್ಗೆ ಟ್ರಬಲ್ ಶೂಟರ್ ಹೇಳಿರೋದೇನು..?

ಬೆಂಗಳೂರು[ಜು.1]  : ಬಿಜೆಪಿ ಮುಖಂಡರು ಯಾರನ್ನು ಸಂಪರ್ಕಿಸಿದ್ದಾರೆ. ಏನೇನು ಮಾಡುತ್ತಿದ್ದಾರೆ ಎನ್ನುವುದೆಲ್ಲವೂ ಸಂಪೂರ್ಣವಾಗಿ ನನಗೆ ಗೊತ್ತಿದೆ ಎಂದು ಜಲಸಂಪನ್ಮೂಲ  ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಬಿಜೆಪಿಯವರು  ಶಾಸಕರ ಜೊತೆಗೆ ಮಾತನಾಡಿರುವುದನ್ನು ನಾನು ಬಹಿರಂಗವಾಗಿ ಹೇಳುವುದಿಲ್ಲ ಎಂದು ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಶಿವಕುಮಾರ್ ಬಿಜೆಪಿಗರ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ. 

ಯಾವ ಶಾಸಕರಿಗೆ ಏನು ನೋವು ಇರುತ್ತದೆಯೋ ಯಾರಿಗೆ ಗೊತ್ತು. ನನಗೆ ನಿನ್ನೆ ಹೊಟ್ಟೆ ನೋವಿತ್ತು.  ವೈದ್ಯರ ಬಳಿ ತೆರಳಿ ಸರಿಮಾಡಿಕೊಂಡೆ. ಅದೇ ರೀತಿ ಕೆಲ ಶಾಸಕರಿಗೆ ಹೊಟ್ಟೆ ನೋವಿರುತ್ತೆ ಅದಕ್ಕೆ ಚಿಕಿತ್ಸೆ ಕೊಟ್ಟು ಸರಿ ಮಾಡಬೇಕಿದೆ. ಆದ್ರೆ ಎಲ್ಲಾ ಸಮಯದಲ್ಲೂ ಚಿಕಿತ್ಸೆ ಫಲಿಸದೇ ಇರಬಹುದು ಎಂದರು. 

ಸದ್ಯ ರಾಜ್ಯದಲ್ಲಿ ಯಾವ ಶಾಸಕರಿಗೂ ಈಗ ಚುನಾವಣೆ  ನಡೆಯುವುದು ಬೇಕಿಲ್ಲ. ಯಾರೂ ರಾಜೀನಾಮೆ ನೀಡಿದರೂ ಸರ್ಕಾರಕ್ಕೆ ಏನೂ ಆಗಲ್ಲ.  ನಾನೇ ರಾಜೀನಾಮೆ ಕೊಟ್ಟರೂ ಮೈತ್ರಿ ಸರ್ಕಾರಕ್ಕೆ ತೊಂದರೆ ಇಲ್ಲ ಎಂದು ಶಿವಕುಮಾರ್ ಹೇಳಿದರು. 

ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ತೊರೆದ ಎಚ್. ವಿಶ್ವನಾಥ್ ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ವದಂತಿ ಬಗ್ಗೆಯೂ ಪ್ರತಿಕ್ರಿಯಿಸಿದ್ದು,  ಅವರು ಹಿರಿಯ ರಾಜಕಾರಣಿ,  ಬಿಜೆಪಿ ಯತ್ನ ಮಾಡಲಾರರು.  ಅವರು ಮಕ್ಕಳಾಟದ ರಾಜಕಾರಣಿ ಅಲ್ಲ ಎಂದು ಶಿವಕುಮಾರ್ ಹೇಳಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಳಿಗಾಲಕ್ಕಾಗಿಯೇ ವಿಶೇಷ ಬ್ರೇಕ್‌ಫಾಸ್ಟ್‌ ರೆಸಿಪಿ ತಿಳಿಸಿದ ಬಾಬಾ ರಾಮ್‌ದೇವ್‌, ಇದರಿಂದ ಇದೆ ಸಾಕಷ್ಟು ಪ್ರಯೋಜನ!
ಕಾದು ಕಾದು ಸುಸ್ತಾದ ಶೆಹಬಾಜ್‌ ಷರೀಫ್‌, ಟರ್ಕಿ ಅಧ್ಯಕ್ಷರ ಜೊತೆ ಪುಟಿನ್‌ ಮೀಟಿಂಗ್‌ ವೇಳೆ ಒಳನುಗ್ಗಿದ ಪಾಕ್‌ ಪ್ರಧಾನಿ!