ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಸರ್ಕಾರ: ಸಿಂಗಂ ’ಅಣ್ಣಾಮಲೈ’ ವರ್ಗಾವಣೆ ರದ್ದು

By Web DeskFirst Published Feb 21, 2019, 3:02 PM IST
Highlights

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ | ಬೆಂಗಳೂರು ದಕ್ಷಿಣ ಡಿಸಿಪಿ ಅಣ್ಣಾಮಲೈ ವರ್ಗಾವಣೆಗೆ ಸಾರ್ವಜನಿಕ ಆಕ್ರೋಶ | ಅಣ್ಣಾಮಲೈ ವರ್ಗಾವಣೆ ರದ್ದುಗೊಳಿಸಿದ ಸರ್ಕಾರ 

ಬೆಂಗಳೂರು (ಫೆ. 21): ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯದ ಸಮ್ಮಿಶ್ರ ಸರ್ಕಾರ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ ಮಾಡಿದೆ.

ಐಪಿಎಸ್‌ಗೆ ಭಾರೀ ಸರ್ಜರಿ : ಅಣ್ಣಾಮಲೈ ಸೇರಿ 29 ಅಧಿಕಾರಿಗಳ ವರ್ಗ

ಖಡಕ್‌ ಐಪಿಎಸ್‌ ಅಧಿಕಾರಿ ಎಂದೇ ಖ್ಯಾತಿವೆತ್ತ ಬೆಂಗಳೂರು ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ ಸೇರಿದಂತೆ 29 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಅಣ್ಣಾಮಲೈಗೆ ಯಾವುದೇ ಹುದ್ದೆಯನ್ನು ತೋರಿಸಿರಲಿಲ್ಲ. 
ಅಣ್ಣಾಮಲೈ ವರ್ಗಾವಣೆಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಸರ್ಕಾರ ಅವರ ವರ್ಗಾವಣೆಯನ್ನು ರದ್ದುಗೊಳಿಸಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಅವರು ದಕ್ಷಿಣ ವಲಯ ಡಿಸಿಪಿಯಾಗಿಯೇ ಮುಂದುವರೆಯಲಿದ್ದಾರೆ ಎಂದು ಸಿಎಂ  ಹೇಳಿದ್ದಾರೆ. 

DCP ಅಣ್ಣಾಮಲೈ ದಿಟ್ಟ ಕ್ರಮ: ಒಂದೇ ಬಾರಿ 71 ಪೊಲೀಸ್ ಸಿಬ್ಬಂದಿ ಎತ್ತಂಗಡಿ

ಬೆಂಗಳೂರಿನ ದಕ್ಷಿಣ ವಲಯ ಡಿಸಿಪಿ ಆಗಿ ನಿಯೋಜಿತರಾಗಿದ್ದ ಇಶಾ ಪಂಥ್ ಗೆ ಆಗ್ನೇಯ ವಿಭಾಗದ ಡಿಸಿಪಿ ಸ್ಥಾನ ನೀಡಲಾಗಿದೆ. 

click me!