
ಬೆಂಗಳೂರು(ಫೆ.21): ಕರ್ನಾಟಕ ಯಕ್ಷಗಾನ ಅಕಾಡೆಮಿ 2017ರ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದೆ. ಬಲಿಪ ನಾರಾಯಣ ಭಾಗವತರು ಪಾರ್ತಿ ಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, ಶಂಕರ ಭಾಗವತ , ಬರೆ ಕೇಶವ ಭಟ್, ಎಚ್. ಶ್ರೀಧರ ಹಂದೆ ಕೋಟ, ಎ.ಎಂ. ಶಿವಶಂಕರಯ್ಯ ಹಾಗೂ ಕರಿಯಣ್ಣನವರು ಯಕ್ಷಗಾನ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ಯಕ್ಷಗಾನ ನೋಡಲು ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಓಡೋಡಿ ಬಂದ ಜಯಮಾಲ
ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ 10 ಸಾಧಕರನ್ನ ಆಯ್ಕೆ ಮಾಡಲಾಗಿದೆ. ಗಜಾನನ ಗಣಪತಿ ಭಟ್ಟ ಹೊಸ್ತೋಟ, ಮೋಹನ್ ಶೆಟ್ಟಿಗಾರ್, ಪೂಕಳ ಲಕ್ಷ್ಮೀನಾರಾಯಣ ಭಟ್ , ಜಮದಗ್ನಿ ಶೀನ ನಾಯ್ಕ , ಜಂಬೂರು ರಾಮಚಂದ್ರ ಶಾನುಭಾಗ್, ಮಹಾದೇವ ಈಶ್ವರ ಹೆಗಡೆ, ಎ.ಎಸ್. ಲಕ್ಷ್ಮಣಯ್ಯ, ವಿದ್ವಾನ್ ಹರಿದಾಸ ನೀವಣೆ ಗಣೇಶಭಟ್ಟ, ಎಲ್. ಶಂಕರಪ್ಪ, ಟಿ.ಎಸ್.ರವೀಂದ್ರ (ತಲಕಾಡು, ಮೂಡಲಪಾಯ ಯಕ್ಷಗಾನ ಭಾಗವತರು ಮತ್ತು ಮದ್ದಳೆ ವಾದಕರು) ಯಕ್ಷ ಸಿರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಯಕ್ಷಗಾನಕ್ಕೆ ಅಪಮಾನ.. ಮೈಕ್ ಕಿತ್ತುಕೊಂಡ ಸಿಬ್ಬಂದಿ!
ಪಾರ್ತಿ ಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿರುವ ಬಲಿಪ ನಾರಾಯಣ ಭಾಗವತರು ಹಾಗೂ ಡಾ. ಜಿ.ಎಸ್. ಭಟ್ಟ ಯಕ್ಷಗಾನ ಪುಸ್ತಕ ಬಹುಮಾನ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಯಕ್ಷಗಾನ ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಫೆ.23 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಹೇಳಿದೆ. ಸಂಜೆ 4 ಗಂಟೆಗೆ ಸಾಧಕರನ್ನು ಮರೆವಣಿಗೆ ಮೂಲಕ ಶಿವಮೊಗ್ಗದ ಕುವೆಂಪು ರಂಗಮಂದಿರಕ್ಕೆ ಕರೆತಂದು, ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.