ರಾಜ್ಯದ ರೈಲ್ವೇಗೆ ಬಜೆಟ್'ನಲ್ಲಿ ಸಿಕ್ಕಿದ್ದೇನು?

By Suvarna Web DeskFirst Published Feb 1, 2017, 3:52 PM IST
Highlights

ನಮ್ಮ ಮೆಟ್ರೋ ಎರಡು ಹೊಸ ಲೈನ್​​ಗಳಿಗೆ ಕೂಡಾ ಇಂದಿನ ಬಜೆಟ್ ಒಪ್ಪಿಗೆ ನೀಡಿದೆ.

ಬೆಂಗಳೂರು (ಫೆ.01): ಕೇಂದ್ರದ ಬಜೆಟ್​ ಮೇಲೆ ಕನ್ನಡಿಗರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ಯೋಜನೆ, ಹಳಿಗಳ ವಿಸ್ತರಣೆ ಹೀಗೆ ಹಲವು ಬೇಡಿಕೆಗಳಿದ್ದವು.

ಇಂದು ಮಂಡನೆಯಾದ  ಬಜೆಟ್'ನಲ್ಲಿ ಚಿಕ್ಕಬೆಣಕಲ್‌'ನಿಂದ ಗಂಗಾವತಿಗೆ 13 ಕಿ.ಮೀ. ಹೊಸ ಮಾರ್ಗವನ್ನು ಮಂಜೂರು ಮಾಡಲಾಗಿದೆ.

ದಂಡೂರಿನಿಂದ ಕಲಬುರಗಿ ನಡುವಿನ 46.81 ಕಿ.ಮೀ. ಹಳಿಯನ್ನು  ಡಬ್ಲಿಂಗ್ ಮಾಡಲಾಗುವುದೆಂದು ಬಜೆಟ್'ನಲ್ಲಿ ಹೇಳಲಾಗಿದೆ.   

ಗುಂತ​ಕಲ್​ - ಬಳ್ಳಾರಿ - ಹೊಸಪೇಟೆ - ತೋರಣಗಲ್-ರಂಜಿತ್ ಪುರ ಹಾಗೂ ಹೊಸಪೇಟೆ - ಗದಗ ರೈಲು ಮಾರ್ಗಕ್ಕೆ ವಿದ್ಯುದೀಕರಣ ಮಾಡುವುದಾಗಿ ಬಜೆಟ್'ನಲ್ಲಿ ಪ್ರಸ್ತಾಪಿಸಲಾಗಿದೆ.

ನಮ್ಮ ಮೆಟ್ರೋ ಎರಡು ಹೊಸ ಲೈನ್​​ಗಳಿಗೆ ಕೂಡಾ ಇಂದಿನ ಬಜೆಟ್ ಒಪ್ಪಿಗೆ ನೀಡಿದೆ. ಎರಡನೇ ಹಂತದ ನಾಲ್ಕು ಮಾರ್ಗಗಳನ್ನು ವಿಸ್ತರಣೆ ಮಾಡಲು ಬಜೆಟ್ ಒಪ್ಪಿಗೆ ನೀಡಿದೆ.

click me!