ರಾಜ್ಯಪಾಲರ ಬಳಿ ಇದೆ ಸರ್ಕಾರ ವಜಾ ಮಾಡುವ ಅಧಿಕಾರ

By Web DeskFirst Published Jul 20, 2019, 7:37 AM IST
Highlights

ರಾಜ್ಯ ಸರ್ಕಾರದಲ್ಲಿ ವಿಶ್ವಾಸ ಮತ ಯಾಚನೆ ಮುಂದೂಡಲಾಗಿದೆ. ಇನ್ನು ರಾಜ್ಯಪಾಲರ ಈ ವೇಳೆ ಯಾವ ನಿರ್ಧಾರ ಕೈಗೊಳ್ಳಬಹುದು ಎನ್ನುವುದು ಸಾಕಷ್ಟು ಕುತೂಹಲ ಮೂಡಿದೆ. 

ಬೆಂಗಳೂರು [ಜು.20]:  ಶನಿವಾರ ನಿಗದಿತ ಅವಧಿಯೊಳಗೆ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಮುಖ್ಯ
ಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಎರಡೆರಡು ಬಾರಿ ನಿರ್ದೇಶನ ನೀಡಿದ ಹೊರತಾಗ್ಯೂ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಕಲಾಪವನ್ನು ಸೋಮ ವಾರಕ್ಕೆ ಮುಂದೂಡಿದರು.

ರಾಜ್ಯಪಾಲರ ಖಚಿತ ನಿರ್ದೇಶನವಿದ್ದರೂ ಶಾಸಕಾಂಗದ ಸಾರ್ವಭೌಮತ್ವ ಉಳಿಸಿಕೊಳ್ಳುವ ನಿಲುವಿಗೆ ಅಂಟಿಕೊಂಡ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ವಿಶ್ವಾಸ ಮತ ನಿರ್ಣಯದ ಚರ್ಚೆ ಶುಕ್ರವಾರ ಅಪೂರ್ಣ ಗೊಂಡ ಕಾರಣ ನೀಡಿ ಈ ತೀರ್ಮಾನ ಕೈಗೊಂಡರು

1 ಸೋಮವಾರ ಬಹುಮತ ಸಾಬೀತಿಗೆ ಕಡೇ ಅವಕಾಶ ನೀಡುವುದಾಗಿ ಸಿಎಂಗೆ ಮತ್ತೊಂದು ಪತ್ರ ಕಳುಹಿಸಬಹುದು
2 ಈಗಾಗಲೇ ನೀಡಿದ 2ನಿರ್ದೇಶನಗಳನ್ನು ಪಾಲಿಸದ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ರವಾನಿಸಬಹುದು
3 ತಮ್ಮ ಸೂಚನೆ ಪಾಲಿಸದಿರುವುದರಿಂದ ಸರ್ಕಾರ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸು ಮಾಡಬಹುದು
4 ರಾಷ್ಟ್ರಪತಿ ಆಡಳಿತ ಹೊರತಾಗಿ ಬೇರೇನಾದರೂ ಮಾಡಬಹುದೇ ಎಂದು ಕಾನೂನು ತಜ್ಞರ ಅಭಿಮತ ಕೇಳಬಹುದು

click me!