ಭಾಷಣಕ್ಕೆ ನಿಂತ ಲಕ್ಷ್ಮೀ ಹೆಬ್ಬಾಳ್ಕರ್ ಬಳಸಿದ ‘ಪದ’ತಂದ ಗೊಂದಲ

By Web DeskFirst Published Jul 20, 2019, 12:24 AM IST
Highlights

ಸದನದಲ್ಲಿ ಹೊಸ ಸದಸ್ಯರು ಆರ್ಭಟಿಸಿದ್ದು ಶುಕ್ರವಾರದ ವಿಶೇಷ. ಸಿಕ್ಕ ಅವಕಾಶದಲ್ಲಿ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ಆದರೆ ಕೆಲವೊಮ್ಮೆ ಮಾತಿನ ದಾಟಿ ತಪ್ಪಿದೆ ಏನಾಗುತ್ತದೆ?

ಬೆಂಗಳೂರು[ 19] ಮಾತನಾಡುತ್ತ ಅಥವಾ ಟೀಕೆ ಮಾಡಲು ಅದ್ಯಾವುದೋ ಪದ ಬಳಕೆ ಮಾಡುತ್ತೇವೆ. ಒಂದು ಸಮುದಾಯಕ್ಕೆ, ಪ್ರಾಣಿಗೆ ಅಥವಾ ವರ್ಗಕ್ಕೆ ಇದರಿಂದ ನೋವಾಗುತ್ತದೆ ಎಂಬ ಅರಿವಿದ್ದರೂ ತಪ್ಪು ಮಾಡುತ್ತಲೇ ಇರುತ್ತೇವೆ. ಸದನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮಾಡಿದ್ದು ಇದನ್ನೇ!

ಶುಕ್ರವಾರ ಸಂಜೆ ಚರ್ಚೆಯಲ್ಲಿ ಮಾತನಾಡುವ ಅವಕಾಶ ಪಡೆದುಕೊಂಡ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಕರ್ನಾಟಕ ರಾಜಕಾರಣವನ್ನು 'ದೊಂಬರಾಟ'ಕ್ಕೆ ಹೋಲಿಸಿದರು. ಅಷ್ಟಕ್ಕೆ ನಿಲ್ಲಿಸದ ಅವರು ತಮ್ಮ ಭಾಷಣದ ಉದ್ದಕ್ಕೂ ದೊಂಬರಾಟ ಎಂಬ ಪದವನ್ನು ಬಳಸುತ್ತಲೇ ಇದ್ದರು.

ಫೆವಿಕಾಲ್ ಕಂಪನಿಗೆ ಆಪದ್ಭಾಂಧವ ಅಂಬಾಸಿಡರ್ ಹುಡುಕಿದ ಈಶ್ವರಪ್ಪ

ಒಂದು ಹಂತದಲ್ಲಿ ಸ್ಪೀಕರ್ ಸ್ಥಾನದಲ್ಲಿ ಕುಳಿತ ಉಪಸಭಾಧ್ಯಕ್ಷ ಜೆ. ಕೆ. ಕೃಷ್ಣಾ ರೆಡ್ಡಿ, "ಆ ಪದವನ್ನು (ದೊಂಬರಾಟ) ಬಳಸಬೇಡಿ,'' ಎಂದರು. ಪರಿಸ್ಥಿತಿ ಅರಿತ ಸಿದ್ದರಾಮಯ್ಯ, ಲಕ್ಷ್ಮೀ ಹೆಬ್ಬಾಳ್ಕರ್ ಅವರ ನೈತಿಕ ಬೆಂಬಲಕ್ಕೆ ನಿಂತರು. "ದೊಂಬರಾಟ ಎಂಬ ಪದವನ್ನು ರೂಢಿಗತವಾಗಿ ರಾಜ್ಯಾದ್ಯಂತ ಬಳಸಿಕೊಂಡು ಬರಲಾಗುತ್ತಿದೆ. ಆ ಸಮಯದಾಯ ಬಗ್ಗೆ ಗೌರವ ಇದೆ. ಇದನ್ನು ಲಕ್ಷ್ಮೀ ಹೆಬ್ಬಾಳ್ಕರ್ ಜಾತಿಗೆ ಅವಮಾನ ಮಾಡಲು ಬಳಸಿಲ್ಲ,'' ಎಂದು ಸಮಜಾಯಿಷಿ ನೀಡಿದರು. ಇದಾದ ಮೇಲೆ ಲಕ್ಷ್ಮೀ ಮತ್ತೆ ತಮ್ಮ ಮಾತು ಮುಂದುವರಿಸಿದರು.

click me!
Last Updated Jul 20, 2019, 12:24 AM IST
click me!