ಡ್ರಾಮಾ ಡ್ರಾಮಾ, 10 ನಿಮಿಷ = 2 ಗಂಟೆ!  ‘ನುಡಿದಂತೆ ನಡೆಯಿರಿ VS ಸಂವಿಧಾನ ಉಳಿಸಿ’

By Web DeskFirst Published Jul 22, 2019, 9:12 PM IST
Highlights

ಬಿಜೆಪಿ ನುಡಿದಂತೆ ನಡೆಯಿರಿ ಎಂದು ಆಡಳಿತ ಪಕ್ಷವನ್ನು ಕೇಳುತ್ತ ಸೋಮವಾರ ವಿಶ್ವಾಸ ಮತ ಯಾಚನೆ ಮಾಡುತ್ತೇನೆ ಎಂದು ಹೇಳಿದರವರು ಎಲ್ಲಿ ಹೋದಿರಿ? ಎಂದು ಪ್ರಶ್ನೆ ಮಾಡುತ್ತಿದ್ದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸಂವಿಧಾನ ಉಳಿಸಿ ಎಂದು ಕೂಗು ಹಾಕುತ್ತಿದ್ದಾರೆ.

ಬೆಂಗಳೂರು[ಜು. 22] ಕರ್ನಾಟಕದಲ್ಲಿ ಉಂಟಾಗಿರುವ ರಾಜಕೀಯ ಹೈಡ್ರಾಮಾ ಸದ್ಯಕ್ಕೆ ಕೊನೆ ಕಾಣುವಂತೆ ಕಾಣುತ್ತಿಲ್ಲ. ಬಿಜೆಪಿಯವರು ಶಾಂತಚಿತ್ತರಾಗಿ ವಿಶ್ವಾಸಮತ ಯಾಚನೆಗೆ ಪಟ್ಟು ಹಿಡಿದಿದ್ದರೆ ದೋಸ್ತಿಗಳು ಸಂವಿಧಾನ ಉಳಿಸಿ ಎಂಬ ಘೋಷಣೆ ಕೂಗುತ್ತಿದ್ದಾರೆ.

10 ನಿಮಿಷ ಕಲಾಪ ಮುಂದೂಡುತ್ತೇನೆ ಎಂದು ಹೇಳಿ ಸ್ಪೀಕರ್ ಎದ್ದು ಹೋಗಿದ್ದರು. ಆದರೆ ಅವರು ನಂತರ ಸದನ ಆರಂಭ ಮಾಡಿದ್ದು ಬರೋಬ್ಬರಿ 2 ಗಂಟೆ ನಂತರ!

ನಾನು JDS ಬಿಟ್ಟಿದ್ದೇಕೆ? ಸದನದಲ್ಲಿ ಸಿದ್ದರಾಮಯ್ಯ ಹೇಳಿದ ಇತಿಹಾಸದ ಗುಟ್ಟು

ಮಧ್ಯರಾತ್ರಿಯಾಗಲಿ ಇಂದೇ ವಿಶ್ವಾಸ ಮತಯಾಚನೆಯಾಗಲಿ ಎಂಬುದು ಬಿಜೆಪಿಯವರ ಪಟ್ಟು. ಬಿಎಸ್ ಯಡಿಯೂರಪ್ಪ ಸಹ ಅದೇ ಮಾತನ್ನು ಹೇಳಿ ಕುಳಿತುಕೊಂಡಿದ್ದಾರೆ. ಮುಂಬೈನಲ್ಲಿರುವ 15 ಜನರ ರಾಜೀನಾಮೆ ಇತ್ಯರ್ಥ ಆಗುವವರೆಗೂ ವಿಶ್ವಾಸಮತ ಯಾಚನೆ ಸಾಧ್ಯವೇ ಇಲ್ಲ ಎಂಬುದು ಕಾಂಗ್ರೆಸ್ ಮಾತು.. ಕಲಾಪ ನಡೆಯುತ್ತಲೇ ಇದೆ..

click me!