ವೆಸ್ಟೆಂಡ್‌ನಲ್ಲಿ ವರ್ಷದಿಂದ ಉಳಿದ ಕಾರಣ ವಿಧಾನಸಭೆಯಲ್ಲೇ ಬಿಚ್ಚಿಟ್ಟ ಸಿಎಂ

By Web DeskFirst Published Jul 23, 2019, 6:33 PM IST
Highlights

ಕುಮಾರಸ್ವಾಮಿ ಐಷರಾಮಿ ಹೋಟೆಲ್ ನಲ್ಲಿ ವಾಸ ಮಾಡುತ್ತಾರೆ. ವೆಸ್ಟ್ ಎಂಡ್ ಹೋಟೆಲ್ ನಿಂದಲೇ ರಾಜ್ಯದ ಆಡಳಿತ ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ಸಾಕಷ್ಟು ಸಾರಿ ವರದಿಯಾಗಿದೆ. ವಿಧಾನಸಭೆಯಲ್ಲೇ ಭಾಷಣ ಮಾಡುತ್ತ ಸಿಎಂ ಕುಮಾರಸ್ವಾಮಿ ತಾಜ್ ವೆಸ್ಟ್ ಎಂಡ್ ರೂಂ ಗುಟ್ಟು ಬಿಚ್ಚಿಟ್ಟಿದ್ದಾರೆ.

ಬೆಂಗಳೂರು[ಜು. 23]  ತಾಜ್ ವೆಸ್ಟ್ ಎಂಡ್ ನಲ್ಲಿ ಕುಮಾರಸ್ವಾಮಿ ಸದಾ ಒಂದು ರೂಂ ಇಟ್ಟುಕೊಂಡು ಐಷಾರಾಮಿ ಬದುಕು ನಡೆಸುತ್ತಿದ್ದಾರೆ ಎಂಬೆಲ್ಲ ಆರೋಪಕ್ಕೆ ಕುಮಾರಸ್ವಾಮಿ ಅವರೇ ಸ್ಪಷ್ಟನೆ ನೀಡಿದ್ದಾರೆ. 

ಅದು 2018ರ ವಿಧಾನಸಭೆ ಚುನಾವಣೆ ಫಲಿತಾಂಶದ ಸಮಯ. ಆ ದಿನದ ಫಲಿತಾಂಶವನ್ನು ಟಿವಿಯಲ್ಲಿ ನೋಡುತ್ತಿದ್ದೆ.  ಏನು ಹೀಗಾಯಿತು? ನಮ್ಮ ರಾಜಕೀಯ ಜೀವನ ಮುಗಿಯಿತೇ? ಎಂದು ಅಂದುಕೊಳ್ಳುತ್ತಿರುವಾಗ ಕಾಂಗ್ರೆಸ್ ಕೇಂದ್ರದ ನಾಯಕ ಗುಲಾಂ ನಬಿ ಆಜಾದ್ ಕರೆ ಮಾಡಿ ನಾವು ಒಂದು ತೀರ್ಮಾನ ತೆಗೆದುಕೊಂಡಿದ್ದೇವೆ. ನೀವು ಸಿಎಂ ಪಟ್ಟ ಏರಬೇಕು ಎಂದು ಕೇಳಿಕೊಂಡರು.

‘ಯಡಿಯೂರಪ್ಪ ಸರ್ಕಾರ ರಚಿಸಿದರೂ ವರ್ಷಕ್ಕಿಂತ ಹೆಚ್ಚು ಕಾಲ ಅಧಿಕಾರ ನಡೆಸಲ್ಲ’

ಇದೇ ಕಾರಣಕ್ಕೆ ಭಾವನಾತ್ಮಕ ದೃಷ್ಟಿಯಿಂದ ಆ ರೂಂ ಹಾಗೆ ಉಳಿಸಿಕೊಂಡಿದ್ದೆ. ಹೊರತು  ಇದರ ಹಿಂದೆ ಬೇರೆ ಯಾವ ಉದ್ದೇಶ ಇಲ್ಲ.ದಯವಿಟ್ಟು ಟೀಕೆ ಮಾಡುವಾಗ ಮೊದಲು ವಿಚಾರ ಗಮನಿಸಿ..ಇದನ್ನು ಮಾಧ್ಯಮಗಳಿಗೆ ಮತ್ತು ವಿರೋಧ ಪಕ್ಷದವರಿಗೆ ಹೇಳುತ್ತಿದ್ದೇನೆ ಎಂದರು.

click me!