ವಿಶ್ವಾಸ ಮತ ಕಳೆದುಕೊಂಡ HDK , 6 ಮತಗಳಿಂದ ದೋಸ್ತಿ ಸರ್ಕಾರ ಪತನ

Published : Jul 23, 2019, 07:43 PM ISTUpdated : Jul 23, 2019, 08:10 PM IST
ವಿಶ್ವಾಸ ಮತ ಕಳೆದುಕೊಂಡ HDK , 6 ಮತಗಳಿಂದ ದೋಸ್ತಿ ಸರ್ಕಾರ ಪತನ

ಸಾರಾಂಶ

ಹಲವು ದಿನಗಳ ಚರ್ಚೆ ಬಳಿಕ ಸಿಎಂ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಮಾಡಿದ್ದಾರೆ. ಮೊದಲು ಧ್ವನಿ ಮತಕ್ಕೆ ಅವಕಾಶ ನೀಡಿದ್ದು ವೋಟಿಂಗ್ ಗೆ ಹಾಕಿದ್ದಾರೆ. ಈ ಮೂಲಕ ಮತ್ತೊಂದು ಹೊಸ ರಾಜಕೀಯ ಬೆಳವಣಿಗೆ ಆರಂಭವಾಗಿದೆ.

ಬೆಂಗಳೂರು[ಜು. 23]  14 ತಿಂಗಳಿನಿಂದ ಜಾರಿಯಲ್ಲಿದ್ದ  ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ಸದನದ ವಿಶ್ವಾಸ ಕಳೆದುಕೊಂಡಿದೆ. ಸಿಎಂ ಕುಮಾರಸ್ವಾಮಿ 18 ದಿನಗಳ ಮೇಲಾಟದ ನಂತರ ಮಂಗಳವಾರ ಸಂಜೆ ವಿಶ್ವಾಸ ಮತ ಯಾಚನೆ ಮಾಡಿದ್ದಾರೆ. ಇದಾದ ನಂತರ ಸ್ಪೀಕರ್ ರೂಲಿಂಗ್ ನೀಡಿದ್ದು ಒಂದೊಂದೇ ಸಾಲಿನಲ್ಲಿ ಇದ್ದವರನ್ನು ಮತಗಣನೆ ಮಾಡಲಾಗಿದೆ.

ಮೊದಲು ದೋಸ್ತಿ ಸರ್ಕಾರದ ಪರವಾಗಿ ಇದ್ದವರ ಲೆಕ್ಕ ಮಾಡಲಾಯಿತು. ಇದಾದ ಮೇಲೆ ವಿಶ್ವಾಸ ಮತಕ್ಕೆ ವಿರುದ್ಧವಾಗಿ ಇದ್ದವರ ಲೆಕ್ಕ ಹಾಕಲಾಯಿತು. ಎಲ್ಲರ ಹೆಸರನ್ನು ಅಧಿಕಾರಿಗಳು ಬರೆದುಕೊಂಡು ಲೆಕ್ಕ ಹಾಕಿದರು.

‘ಯಡಿಯೂರಪ್ಪ ಸರ್ಕಾರ ರಚಿಸಿದರೂ ವರ್ಷಕ್ಕಿಂತ ಹೆಚ್ಚು ಕಾಲ ಅಧಿಕಾರ ನಡೆಸಲ್ಲ

ಫಲಿತಾಂಶವನ್ನು ಪ್ರಕಟ ಮಾಡಿದ ಸ್ಪೀಕರ್ ರಮೇಶ್ ಕುಮಾರ್ ಸಿಎಂ ಮಂಡಿಸಿದ ವಿಶ್ವಾಸಮತ ಬಿದ್ದುಹೋಗಿದೆ ಎಂದು ಘೋಷಣೆ ಮಾಡಿದರು. ಕರ್ನಾಟಕದ ದೋಸ್ತಿ ಸರ್ಕಾರ ವಿಶ್ವಾಸಮತ ಯಾಚನೆಯಲ್ಲಿ ಸೋಲು ಕಂಡಿದ್ದು ಅಧಿಕಾರ ಸ್ಥಾಪಿಸುವತ್ತ ಬಿಜೆಪಿ ಕಾಲಿರಿಸಿದೆ. ಕಳೆದ 18 ದಿನಗಳಿಂದ ನಡೆಯುತ್ತಿದ್ದ ಎಲ್ಲ ರಾಜಕಾರಣದ ಹೈಡ್ರಾಮಕ್ಕೆ ತೆರೆಬಿದ್ದಿದ್ದು ಕಮಲ ನಾಯಕರು ಇನ್ನು ಮುಂದೆ ಹೇಗೆ ಆಡಳಿತ ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಸರ್ಕಾರ ರಚನೆಹಾದಿಯಲ್ಲಿ ಬಿಜೆಪಿ ಹೊರಟಿದ್ದು ಸಿಎಂ ಕುರ್ಚಿಗೆ ಬಿಎಸ್. ಯಡಿಯೂರಪ್ಪ ಸನಿಹದಲ್ಲಿದ್ದಾರೆ.

ಸದನದಲ್ಲಿ ಹಾಜರಿದ್ದವರು:

ಸದನದಲ್ಲಿ ಹಾಜರಿದ್ದವರು: 204

ವಿಶ್ವಾಸ ಮತ ಪ್ರಸ್ತಾವದ ಪರ: 99

ವಿಶ್ವಾಸ ಮತ ಪ್ರಸ್ತಾವದ ವಿರುದ್ಧ: 105

ಗೈರಾದವರು ಇಬ್ಬರು ಪಕ್ಷೇತರರು ಸೇರಿ 20

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತುಂಗಭದ್ರಾ ಜಲಾಶಯದ ಕ್ರಸ್ಟ್‌ಡ್ ಗೇಟ್‌ ಅಳವಡಿಕೆ ಹಿನ್ನೆಲೆ, 6 ತಿಂಗಳು ಕಾಲುವೆಗಳಿಗೆ ನೀರು ಸ್ಥಗಿತ!
KPTCL ಕೆಲಸ, ಶನಿವಾರ ಬೆಂಗಳೂರಲ್ಲಿ ಕರೆಂಟ್‌ ಇರಲ್ಲ..!