ಸಿಎಂ ಪರಿಹಾರ ನಿಧಿಗೆ ಇಲ್ಲಿ ದೇಣಿಗೆ ನೀಡಿ

By Web DeskFirst Published Aug 9, 2019, 10:43 AM IST
Highlights

ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ನಿಟ್ಟಿನಲ್ಲಿ ಸಹಾಯ ನೀಡುವವರು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಬಹುದು. ಹೆಚ್ಚಿನ ಮಾಹಿತಿ ಇಲ್ಲಿದೆ. 

ಬೆಂಗಳೂರು [ಆ.09]:  ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧೆಡೆ ನೆರೆ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ನೊಂದ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿ ಸರ್ಕಾರದೊಂದಿಗೆ ಕೈ ಜೋಡಿಸುವಂತೆ ರಾಜ್ಯ ಸರ್ಕಾರವು ಮನವಿ ಮಾಡಿಕೊಂಡಿದೆ. ದೇಣಿಗೆ ಸಲ್ಲಿಸಲು ಆಸಕ್ತಿ ಹೊಂದಿರುವ ಸಾರ್ವಜನಿಕರು ಸರ್ಕಾರದ ಖಾತೆಗೆ ನೇರವಾಗಿ ಹಣವನ್ನು ವರ್ಗಾಯಿಸಬಹುದು. ಚೆಕ್‌/ಡಿಡಿ ಮೂಲಕವೂ ದೇಣಿಗೆಯನ್ನು ಸಲ್ಲಿಸಬಹುದು. ನಾಗರಿಕರು ನೀಡುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ 80ಜಿ(2)ಯಡಿ ತೆರಿಗೆ ವಿನಾಯಿತಿ ಇರಲಿದೆ. 

ಸಂತ್ರಸ್ತರ ನೆರವಿಗೆ ಸಹಾಯ ಹಸ್ತ ನೀಡುವವರು ಹಣ ಕಳುಹಿಸಬೇಕಾದ ವಿವರ:

ಖಾತೆಯ ಹೆಸರು :  Chief Minister Relief Fund
Natural calamity

ಬ್ಯಾಂಕ್‌ ಹೆಸರು :  S.B.I Bank

ಶಾಖೆ :  Vidhana Soudha Branch

ಖಾತೆ ಸಂಖ್ಯೆ: 37887098605

ಐಎಫ್‌ಎಸ್‌ಸಿ ಕೋಡ್‌ : SBIN0040277

ಎಂ.ಐ.ಸಿ.ಆರ್‌.ಸಂಖ್ಯೆ: 560002419

ಚೆಕ್‌ ಕಳುಹಿಸಬೇಕಾದ ವಿಳಾಸ : ನಂ.235-ಎ, 2ನೇ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು, 560001

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

click me!