ರಾಜ್ಯದ 68 ಬರಪೀಡಿತ ತಾಲೂಕುಗಳು ಹಾಗೂ ಅವುಗಳ ಲಿಸ್ಟ್

Published : Sep 28, 2016, 05:16 AM ISTUpdated : Apr 11, 2018, 01:06 PM IST
ರಾಜ್ಯದ 68 ಬರಪೀಡಿತ ತಾಲೂಕುಗಳು  ಹಾಗೂ ಅವುಗಳ ಲಿಸ್ಟ್

ಸಾರಾಂಶ

ಬೆಂಗಳೂರು(ಸೆ.28): ತೀವ್ರ ಮಳೆ ಕೊರತೆಯಿಂದ ಬೆಳೆಹಾನಿಗೀಡಾದ ರಾಜ್ಯದ 68 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿದೆ.

ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಂತ್ರಿ ಪರಿಷತ್‌ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಸರ್ಕಾರದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ನಿಗದಿ ಮಾಡಿದ ಮಾನದಂಡದ ಅನ್ವಯ ಈ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ವಾಡಿಕೆಗಿಂತ ಶೇ. 20ರಷ್ಟುಮಳೆ ಕೊರತೆ, ಭೂಮಿಯ ಮೇಲಿನ ತೇವಾಂಶ ಶೇ. 50ರಷ್ಟು ಕೊರತೆ, ಸತತ ನಾಲ್ಕು ವಾರಗಳ ಶುಷ್ಕ ವಾತಾವರಣ, ಬಿತ್ತನೆ ಪ್ರದೇಶದ ಪೈಕಿ ಶೇ.33ರಷ್ಟುಬೆಳೆ ಹಾನಿಗೀಡಾಗಿರುವ ಅಂಶಗಳನ್ನು ಪರಿಗಣಿಸಿ ಬರಪೀಡಿತ ತಾಲೂಕು ಗುರುತಿಸಲಾಗಿದೆ ಎಂದು ಹೇಳಿದರು.

ಬರಪೀಡಿತ ತಾಲೂಕುಗಳು ಯಾವುವು ?

ಕೋಲಾರ ಜಿಲ್ಲೆ- ಬಂಗಾರಪೇಟೆ.

ಚಿಕ್ಕಬಳ್ಳಾಪುರ-ಬಾಗೇಪಲ್ಲಿ.

ತುಮಕೂರು-ಶಿರಾ,

ಚಿತ್ರದುರ್ಗ-ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು.

ಚಾಮರಾಜನಗರ-ಮೊಳಕಾಲ್ಮೂರು, ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೆಗಾಲ, ಯಳಂದೂರು.

ಮೈಸೂರು-ಹೆಗ್ಗಡದೇವನಕೋಟೆ, ಹುಣಸೂರು, ಕೃಷ್ಣರಾಜನಗರ, ಮೈಸೂರು, ನಂಜನಗೂಡು, ಪಿರಿಯಾಪಟ್ಟಣ, ಟಿ.ನರಸೀಪುರ.

ಮಂಡ್ಯ-ಕೃಷ್ಣರಾಜಪೇಟೆ, ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ.

ಬಳ್ಳಾರಿ-ಬಳ್ಳಾರಿ.

ಕೊಪ್ಪಳ-ಗಂಗಾವತಿ, ಯಲಬುರ್ಗ.

ರಾಯಚೂರು-ದೇವದುರ್ಗ, ಲಿಂಗಸಗೂರು, ಸಿಂಧನೂರು.

ಯಾದಗಿರಿ-ಶಹಪುರ.

ಬೆಳಗಾವಿ-ಬೈಲಹೊಂಗಲ, ಬೆಳಗಾವಿ, ಗೋಕಾಕ್‌, ಖಾನಾಪುರ, ರಾಮದುರ್ಗ, ಸವದತ್ತಿ.

ಬಾಗಲಕೋಟೆ-ಬದಾಮಿ, ಬೀಳಗಿ, ಹುನಗುಂದ, ಮುಧೋಳ.

ವಿಜಯಪುರ-ಇಂಡಿ, ವಿಜಯಪುರ, ಮುದ್ದೇಬಿಹಾಳ, ಸಿಂಧಗಿ.

ಗದಗ-ಮುಂಡರಗಿ, ಗದಗ, ಶಿರಹಟ್ಟಿ, ನರಗುಂದ, ರೋಣ.

ಹಾವೇರಿ-ಹಿರೇಕೆರೂರ, ಸವಣೂರ.

ಧಾರವಾಡ-ಕಲಘಟಗಿ, ಕುಂದಗೋಳ, ನವಲಗುಂದ

ಶಿವಮೊಗ್ಗ-ಹೊಸನಗರ, ಸಾಗರ, ತೀರ್ಥಹಳ್ಳಿ.

ಹಾಸನ-ಅರಕಲಗೂಡು, ಅರಸೀಕೆರೆ, ಬೇಲೂರು, ಹಾಸನ.

ಚಿಕ್ಕಮಗಳೂರು-ಕಡೂರು, ಚಿಕ್ಕಮಗಳೂರು, ಮೂಡಿಗೆರೆ, ನರಸಿಂಹರಾಜಪುರ.

ಕೊಡಗು-ಮಡಿಕೇರಿ, ವಿರಾಜಪೇಟೆ.

ಉತ್ತರಕನ್ನಡ-ಹಳಿಯಾಳ, ಸಿದ್ದಾಪುರ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ
ಕ್ರಿಸ್ಮಸ್ ಹಬ್ಬಕ್ಕೆ ಭಾರತದ ಹಲವು ನಗರದಲ್ಲಿ ಡ್ರೈ ಡೇ; ಮದ್ಯದಂಗಡಿ, ಬಾರ್ ತೆರೆದಿರುತ್ತಾ?