ವೈದ್ಯರೊಬ್ಬರು 40 ರೂ. ಟೋಲ್ ಹಣ ಕಡಿತಕ್ಕೆ ಸಿಬ್ಬಂದಿಗೆ ಡೆಬಿಟ್ ಕಾರ್ಡ್ ಕೊಟ್ಟರು? ಆಮೇಲೆ ಎಸ್'ಎಂಎಸ್ ಬಂದಾಗ ಮೂರ್ಚೆ ಹೋದರು !

By Suvarna Web DeskFirst Published Mar 13, 2017, 9:13 PM IST
Highlights

ವೈದ್ಯರು ರಸೀದಿಯೊಂದಿಗೆ ಕಾರ್ಡ್ ಹಿಂಪಡೆದು ಮುಂದಕ್ಕೆ ತೆರಳಿದ್ದಾರೆ. ಕೆಲ ನಿಮಿಷಗಳ ನಂತರ ಅವರ ಮೊಬೈಲ್'ಗೆ ಹಣ ಕಡಿತಗೊಂಡ ಸಂದೇಶ ಬಂದಿತ್ತು. ಎಸ್'ಎಂಎಸ್ ನೋಡಿದ ಅವರಿಗೆ ಶಾಕ್ ಕಾದಿತ್ತು. ಟೋಲ್'ನಲ್ಲಿ 40 ರೂ. ಬದಲಿಗೆ 4 ಲಕ್ಷ ರೂ. ಕಡಿತಗೊಂಡಿತ್ತು. ತಕ್ಷಣವೇ ಟೋಲ್'ಗೆ ಹಿಂತಿರುಗಿದ ವೈದ್ಯರು ಟೋಲ್ ಪಾವತಿಸಿದ ಪ್ಲಾಜಾ ಕಡೆಗೆ ವಾಪಸ್ ತೆರಳಿ ಇಷ್ಟು ಹಣ ಕಡಿತವಾಗಿರುವುದಕ್ಕೆ ಪ್ರಶ್ನಿಸಿದ್ದಾರೆ.

ಉಡುಪಿ(ಮಾ.14): ವೈದ್ಯರೊಬ್ಬರು 40 ರೂ ಟೋಲ್ ಹಣಕ್ಕೆ ಭಾರಿ ಹಣ ತೆತ್ತ ಘಟನೆ ಉಡುಪಿ ಹತ್ತಿರದ ಕೊಚ್ಚಿ-ಮುಂಬೈ ರಾಷ್ಟ್ರೀಯ ಹೆದ್ದಾರಿ ಗೇಟ್'ನ ಸಾಸ್ತಾನದ ಗುಂಡ್ಮಿ ಟೋಲ್'ಗೇಟ್'ನಲ್ಲಿ ನಡೆದಿದೆ

ಮೈಸೂರು ಮೂಲದ ಡಾ.ರಾವ್ ಎಂಬ ವೈದ್ಯ ಉಡುಪಿ ಕಡೆಗೆ ತಮ್ಮ ಕಾರಿನಲ್ಲಿ ಪ್ರವಾಸ ತೆರಳಿದ್ದಾರೆ. ಹೆದ್ದಾರಿಯಲ್ಲಿ ಸಿಕ್ಕ ಟೋಲ್'ನಲ್ಲಿ ಹಣ ಪಾವತಿಸಲು ಟೋಲ್ ಸಿಬ್ಬಂದಿಗೆ ಡೆಬಿಟ್ ಕಾರ್ಡ್ ಕೊಟ್ಟಿದ್ದಾರೆ. ಸಿಬ್ಬಂದಿ ರಾವ್ ಬಳಿ ನಿಗದಿತ ಶುಲ್ಕ 40 ರೂ.ಗಳನ್ನು ಪಾವತಿಸಿಕೊಂಡಿರುವುದಾಗಿ ತಿಳಿಸಿ ಕಾರ್ಡನ್ನು ರಾವ್ ಅವರಿಗೆ ವಾಪಸ್ ನೀಡಿದ್ದಾರೆ.

ವೈದ್ಯರು ರಸೀದಿಯೊಂದಿಗೆ ಕಾರ್ಡ್ ಹಿಂಪಡೆದು ಮುಂದಕ್ಕೆ ತೆರಳಿದ್ದಾರೆ. ಕೆಲ ನಿಮಿಷಗಳ ನಂತರ ಅವರ ಮೊಬೈಲ್'ಗೆ ಹಣ ಕಡಿತಗೊಂಡ ಸಂದೇಶ ಬಂದಿತ್ತು. ಎಸ್'ಎಂಎಸ್ ನೋಡಿದ ಅವರಿಗೆ ಶಾಕ್ ಕಾದಿತ್ತು. ಟೋಲ್'ನಲ್ಲಿ 40 ರೂ. ಬದಲಿಗೆ 4 ಲಕ್ಷ ರೂ. ಕಡಿತಗೊಂಡಿತ್ತು. ತಕ್ಷಣವೇ ಟೋಲ್'ಗೆ ಹಿಂತಿರುಗಿದ ವೈದ್ಯರು ಟೋಲ್ ಪಾವತಿಸಿದ ಪ್ಲಾಜಾ ಕಡೆಗೆ ವಾಪಸ್ ತೆರಳಿ ಇಷ್ಟು ಹಣ ಕಡಿತವಾಗಿರುವುದಕ್ಕೆ ಪ್ರಶ್ನಿಸಿದ್ದಾರೆ.

ಆದರೆ ಇದು ತಾಂತ್ರಿಕ ದೋಷಯಿಂದ ಈ ರೀತಿ ಸಮಸ್ಯೆಯುಂಟಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ ಬೃಹತ್ ಮೊತ್ತವಾದ ಕಾರಣ ಟೋಲ್ ಸಹಾಯಕರು ಹಣ ತಕ್ಷಣವೇ ವಾಪಸ್ ನೀಡಲಿಲ್ಲ. ಅಷ್ಟಕ್ಕೆ ಸುಮ್ಮನಾಗದ ವೈದ್ಯರು ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಟೋಲ್ ಕಂಪನಿಯವರಿಂದ ಹಣ ವಾಪಸ್ ಕೊಡಿಸುವಂತೆ ದೂರು ನೀಡಿದ್ದಾರೆ.

ದೂರು ನೀಡಿದ ನಂತರ ಟೋಲ್ ಕಂಪನಿ ಉಳಿದ ಹಣಕ್ಕೆ ಚೆಕ್ ನೀಡಲು ಮುಂದಾಗಿದ್ದಾರೆ. ಆದರೆ ವೈದ್ಯರು ತಮಗೆ ನಗದೆ ಬೇಕೆಂದು ಪಟ್ಟು ಹಿಡಿದಿದ್ದಾರೆ. ಟೋಲ್ ಸಿಬ್ಬಂದಿ ನಗದನ್ನು ನೀಡುವುದಾಗಿ ಭರವಸೆ ನೀಡಿದ ನಂತರ ಸಮಸ್ಯೆ ಇತ್ಯರ್ಥವಾಗಿದೆ.

click me!