
ಲಖನೌ(ಮಾ.14): ಈ ಬಾರಿ ಉತ್ತರಪ್ರದೇಶದಲ್ಲಿ ಬಿಜೆಪಿಯ ಭರ್ಜರಿ ಜಯಕ್ಕೆ ಪ್ರಧಾನಿ ಮೋದಿ ಅವರೇ ಕಾರಣ ಎಂದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು. ಇದಕ್ಕೆ ಪೂರಕವಾದಂಥ ಅಂಶಗಳು ಇದೀಗ ಬೆಳಕಿಗೆ ಬಂದಿವೆ. ಪಂಚರಾಜ್ಯಗಳ ಚುನಾವಣೆ ವೇಳೆ ಮೋದಿ ಅವರು ಪ್ರಚಾರ ನಡೆಸಿದ ಕ್ಷೇತ್ರಗಳ ಪೈಕಿ ಬಹುತೇಕ ಕಡೆ ಬಿಜೆಪಿ ಜಯ ಸಾಧಿಸಿದೆ.
ಉತ್ತರಪ್ರದೇಶದಲ್ಲಿ 118 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೋದಿ 23 ರಾಲಿಗಳಲ್ಲಿ ಭಾಗಿಯಾಗಿದ್ದರು. ಈ ಪೈಕಿ ಬಿಜೆಪಿ 99 ಕಡೆ ಜಯ ಸಾಸಿದೆ. ಇಲ್ಲಿ ಮೋದಿ ಸ್ಟ್ರೈಕ್ ರೇಟ್ ಶೇ.86ರಷ್ಟಿದೆ.
ಇನ್ನು ಉತ್ತರಾಖಂಡದಲ್ಲಿ ಮೋದಿ 25 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ದು, ಈ ಪೈಕಿ 20 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. 5 ಮಾತ್ರ ಕಾಂಗ್ರೆಸ್ ಪಾಲಾಗಿದೆ.
ಪಂಜಾಬ್‌ನಲ್ಲಿ 10 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 2 ರಾಲಿ ನಡೆಸಿದ್ದು, ಈ ಪೈಕಿ 5ರಲ್ಲಿ ಶಿರೋಮಣಿ ಅಕಾಲಿ ದಳ, 5ರಲ್ಲಿ ಕಾಂಗ್ರೆಸ್, ಒಂದರಲ್ಲಿ ಆಪ್ ಗೆದ್ದಿದೆ. ಇನ್ನು ಗೋವಾದಲ್ಲಿ ಮೋದಿ ಪ್ರಚಾರ ನಡೆಸಿದ್ದ ಪಣಜಿಯಲ್ಲಿ ಬಿಜೆಪಿ ಗೆದ್ದಿದೆ. ಮಣಿಪುರದಲ್ಲಿ 26 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೋದಿ ಪ್ರಚಾರ ನಡೆಸಿದ್ದು, ಈ ಪೈಕಿ 13ರಲ್ಲಿ ಬಿಜೆಪಿ ಗೆದ್ದಿದೆ.
ರಾಹುಲ್ ಸ್ಟ್ರೈಕ್ ರೇಟ್ ಶೇ.15
ಪಂಚ ರಾಜ್ಯಗಳ ಚುನಾವಣೆ ವೇಳೆ ರಾಹುಲ್ ಒಟ್ಟಾರೆ 71 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 68 ರಾಲಿಯಲ್ಲಿ ಭಾಗಿಯಾಗಿದ್ದರು. ಇದರಲ್ಲಿ 54 ರಾಲಿ ಉತ್ತರಪ್ರದೇಶವೊಂದರಲ್ಲೇ ನಡೆದಿತ್ತು. ಉಳಿದಂತೆ ಪಂಜಾಬ್‌ನಲ್ಲಿ 6, ಉತ್ತರಾಖಂಡದಲ್ಲಿ 5, ಗೋವಾ ಮತ್ತು ಮಣಿಪುರದಲ್ಲಿ ತಲಾ 2 ರ‌್ಯಾಲಿಯಲ್ಲಿ ಭಾಗಿಯಾಗಿದ್ದರು.
ಹೀಗೆ ಒಟ್ಟಾರೆ ರಾಹುಲ್ ಪ್ರಚಾರ ನಡೆಸಿದ್ದ 71 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ 11 ಸ್ಥಾನ ಗೆದ್ದಿದೆ (ಶೇ.15). ಇನ್ನು ರಾಹುಲ್ ಪ್ರಚಾರ ನಡೆಸಿದ ಕ್ಷೇತ್ರಗಳ ಪೈಕಿ ಬಿಜೆಪಿ 47ರಲ್ಲಿ ಗೆದ್ದಿದೆ.
ಉತ್ತರಪ್ರದೇಶದಲ್ಲಿ ತಾನು ಸ್ಪರ್ಧಿಸಿದ್ದ 105 ಕ್ಷೇತ್ರಗಳ ಪೈಕಿ ಕೇವಲ 7ರಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತ್ತು. ವಿಶೇಷವೆಂದರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂ ಪ್ರಚಾರ ಮಾಡಿದ್ದ 46 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ 3ರಲ್ಲಿ ಜಯ ಸಾಧಿಸಿದ್ದರೆ, ಸಮಾಜವಾದಿ ಪಕ್ಷ 4 ಕಡೆ ಗೆದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.