ನಿಖಿಲ್‌ಗೆ ಮದುವೆ ಫಿಕ್ಸ್ ಮಾಡಲು ಶೃಂಗೇರಿಗೆ ಹೋದ್ರಾ ಕುಮಾರಸ್ವಾಮಿ?

By Web Desk  |  First Published Dec 6, 2018, 9:10 PM IST

ಸಿಎಂ ಕುಮಾರಸ್ವಾಮಿ ಶಕ್ತಿ ಕೇಂದ್ರ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅನೇಕ ವಿಚಾರಗಳನ್ನು ಹೇಳಿದ್ದಾರೆ.


ಶೃಂಗೇರಿ[ಡಿ.06]  ಎಲ್ಲಾ ಒಳ್ಳೆಯ ಕಾರ್ಯಕ್ಕೂ ಗುರುಗಳ ಆಶೀರ್ವಾದ ಇರಬೇಕು. ಮಗ ನಿಖಲ್ ಕುಮಾರಸ್ವಾಮಿ‌ ಮದುವೆ ವಿಷಯದ ಬಗ್ಗೆಯೂ ಚರ್ಚೆ ಮಾಡಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಶೃಂಗೇರಿಯಲ್ಲಿ ಹೇಳಿದ್ದಾರೆ.

 ಭೇಟಿಯಲ್ಲಿ ಮದುವೆ ವಿಚಾರಕ್ಕೂ ಗುರುಗಳ ಆಶೀರ್ವಾದ ಪಡೆಯುವ ಉದ್ದೇಶ ಇದೆ. ಗುರುಗಳ ಅರ್ಶಿವಾದ ಶಾರದಾಂಬೆ ದರ್ಶನ ಪಡೆಯಲು ಬಂದಿದ್ದೇನೆ. ಶೃಂಗೇರಿ ಕ್ಷೇತ್ರಕ್ಕೆ ಬಂದು ಶಾರದಾಂಬೆ ದರ್ಶನ ಪಡೆದು ಗುರುಗಳ ಆರ್ಶಿವಾದ ಪಡೆಯುವಾಗ ಹಲವಾರು ರೀತಿಯ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ ಎಂದು ಹೇಳಿದರು.

Tap to resize

Latest Videos

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಮಾಸ್ಟರ್ ಪ್ಲ್ಯಾನ್

ನಾವು ಕದ್ದುಮುಚ್ಚಿ ವಾಮಚಾರ ಯಾಗ ಮಾಡಿಸೋ ಪ್ರಶ್ನೆ ಇಲ್ಲ ಎಂದು ಕೇರಳಕ್ಕೆ ತೆರಳಿರುವ ಯಡಿಯೂರಪ್ಪಗೆ ಟಾಂಗ್ ನೀಡಿದ ಕುಮಾರಸ್ವಾಮಿ ದೇವರನ್ನು ನಂಬಿದ್ದೇವೆ ದೇವರ ಪ್ರಾರ್ಥನೆ ಮಾಡುತ್ತೇವೆ. ಅಧೀವೇಶನ ಸುಸೂತ್ರವಾಗಿ ನಡೆಯಬೇಕು ಹಾಹಾಗಿ ತಾಯಿಯ ಆರ್ಶಿವಾದ ಪಡೆಯಲು ಬಂದಿದ್ದೇನೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಡಿಸೆಂಬರ್ 10 ರಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಸಿನಿಮಾ ನಾಯಕರಾಗಿಯೂ ಗುರುತಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಅವರ ವಿವಾಹಕ್ಕೆ ಸಂಬಂಧಿಸಿ ಸುದ್ದಿಗಳು ಹರಿದಾಡಿದ್ದವು.

 

 

 

 

click me!