ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಒಂದಾದ ಮೇಲೋಂದು ಸಂಕಷ್ಟ ಎದುರಾಗುತ್ತಲೇ ಇವೆ. ಆ ಸಂಕಷ್ಟಗಳಿಂದ ಪಾರಾಗಲು ಮೈತ್ರಿ ಪಕ್ಷಗಳ ನಾಯಕರು ಕೂಡ ಅಷ್ಟೇ ಕಸರತ್ತು ನಡೆಸಿದ್ದಾರೆ.
ಬೆಂಗಳೂರು, [ಡಿ.06] ಒಂದ್ಕ ಡೆ ಮೈತ್ರಿ ಸರ್ಕಾರ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಅಧಿವೇಶನದಲ್ಲಿ ಸರ್ಕಾರದ ಚಳಿ ಬಿಡಿಸಲು ವಿಪಕ್ಷಗಳು ಹಾಗೂ ರೈತ ಸಂಘಟನೆಗಳೂ ಸಹ ಸಜ್ಜಾಗಿವೆ.
ಆ ಸಂಕಷ್ಟಗಳಿಂದ ಪಾರಾಗಲು ಮೈತ್ರಿ ಪಕ್ಷಗಳ ನಾಯಕರು ಕೂಡ ಅಷ್ಟೇ ಕಸರತ್ತು ನಡೆಸಿದ್ದು, ಬೆಳಗಾವಿ ಅಧಿವೇಶನದಲ್ಲಿ ವಿರೋಧ ಪಕ್ಷವನ್ನ ಸುಸೂತ್ರವಾಗಿ ನಿಭಾಯಿಸಲು ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡ ಕೆಲ ರಣತಂತ್ರಗಳನ್ನ ರೂಪಿಸಿದ್ದಾರೆ.
ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ ಪಕ್ಕಾ ಎಂದು ಹೇಳುವ ಮೂಲಕ ಮಂತ್ರಿಗಿರಿ ಆಕಾಂಕ್ಷಿಗಳು ಬಂಡಾಯವೇಳದಂತೆ ಮೂಗಿಗೆ ತುಪ್ಪ ಸವರಿದ್ದಾರೆ.
ಒಂದ್ಕಡೆ ಸಚಿವ ಸ್ಥಾನದ ಆಕಾಂಕ್ಷಿಗಳ ಅಸಮಾಧಾನ ಶಮನಗೊಳಿಸುವಲ್ಲಿ ಯಶಸ್ವಿಯಾದ್ರೆ. ಮತ್ತೊಂದೆಡೆ ಕಬ್ಬು ಬೆಳೆಗಾರರ ಬೇಡಿಕೆಗಳು ಸೇರಿ ರೈತರ ವಿವಿಧ ಸಮಸ್ಯೆಗಳನ್ನ ಈಡೇರಿಸದಿದ್ದರೆ, ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನ ರೈತ ಮುಖಂಡರು ನೀಡಿದ್ದರು.
ಹೀಗಾಗಿ ಸರ್ಕಾರಕ್ಕೆ ಎದುರಾಗಲಿರೋ ಸಂಕಷ್ಟ ನಿವಾರಣೆಗೆ ಸಿಎಂ ರಣತಂತ್ರ ರೂಪಿಸಿದ್ದು, ರೈತರ ಎಲ್ಲಾ ಸಮಸ್ಯೆಗಳಿಗೂ ಮುಂದಿನ ಮುಂದಿನ ಬಜೆಟ್ ನಲ್ಲಿ ಉತ್ತರ ಸಿಗಲಿದೆ ಎನ್ನೋ ಮೂಲಕ ಬೀಸೋ ದೊಣ್ಣೆಯಿಂದ ಪಾರಾಗುವ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದದಲ್ಲಿ ಇದೇ ಡಿಸೆಂಬರ್ 10ರಿಂದ ಡಿ.21ರವರೆಗೆ ಚಳಿಗಾಲ ಅಧಿವೇಶನ ನಡೆಯಲಿದ್ದು, ಅಧಿವೇಶನದಲ್ಲಿ ಏನೆಲ್ಲ ನಡೆಯುತ್ತೋ ಎನ್ನುವುದನ್ನ ಕಾದುನೋಡಬೇಕಿದೆ.