
ಶಿವಮೊಗ್ಗ, [ಅ.16]: ಮಧು ಬಂಗಾರಪ್ಪನವರು ಚುನಾವಣೆಗೆ ನಿಲ್ಲಲು ನಾವು ದೇವೇಗೌಡರು ಒತ್ತಾಯ ಮಾಡಿದ್ದೇವೆ. ಮಧು ಒಳ್ಳೆ ಹುಡುಗ ಉತ್ತಮ ಹೃದಯವಂತ ಆತನನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿದರು.
ಶಿವಮೊಗ್ಗದಲ್ಲಿ ಇಂದು [ಮಂಗಳವಾರ] ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, 20ನೇ ತಾರೀಕು ನಂತರ ಶಿವಮೊಗ್ಗ ಜಿಲ್ಲೆಯ ಹಳ್ಳಿ-ಹಳ್ಳಿ ಸುತ್ತುತ್ತೇನೆ. ಮುಂದಿನ ಕೇಂದ್ರ ಸರ್ಕಾರದ ಭವಿಷ್ಯದ ಬದಲಾವಣೆಗೆ ಈ ಚುನಾವಣೆ ಮೂಲ. ಪಾಪದ ಹಣದ ಮೂಲಕ ಸರ್ಕಾರ ಕೆಡವಲು ಹೊರಟಿರುವವರಿಗೆ ಬುದ್ದಿ ಕಲಿಸಲು ಈ ಚುನಾವಣೆ ದಿಕ್ಸೂಚಿ.
ಇದು ಕಾಂಗ್ರೆಸ್ ಜೆಡಿಎಸ್ ಸರ್ಕಾರವಲ್ಲ ನಿಮ್ಮ ಸರ್ಕಾರ. ಬಂಗಾರಪ್ಪನವರು ಕೊಟ್ಟಂತಹ ಕೊಡುಗೆ ಆಪಾರ.ಹಾಗಾಗಿ ಈ ಜಿಲ್ಲೆಯಲ್ಲಿ ಬಂಗಾರಪ್ಪನ ಕುಟುಂಬವನ್ನು ಉಳಿಸಲು ಕುಮಾರಸ್ವಾಮಿ ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.