ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ: ಬಾಮೈದಾ ಪರ ಶಿವಣ್ಣ ಪ್ರಚಾರ ಮಾಡ್ತಾರಾ?

By Web DeskFirst Published Oct 16, 2018, 4:07 PM IST
Highlights

ಮಾಜಿ ಶಾಸಕ ಮಧು ಬಂಗಾರಪ್ಪ ವರು ಇಂದು [ಮಂಗಳವಾರ] ಜೆಡಿಎಸ್ ಹಾಗೂ ಕಾಂಗ್ರೆಸ್ ಒಮ್ಮತದ ಮೈತ್ರಿ ಅಭ್ಯರ್ಥಿಯಾಗಿ  ನಾಮಪತ್ರ ಸಲ್ಲಿಸಿದ್ದಾರೆ. ಆದ್ರೆ ಮಾವ ನಟ ಡಾ. ಶಿವರಾಜ್ ಕುಮಾರ್ ಅವರು ಬಾಮೈದಾ ಪರ ಪ್ರಚಾರ ಮಾಡ್ತಾರಾ? ಇದಕ್ಕೆ ಮಧು ಬಂಗಾರ ಹೇಳಿದ್ದೇನು? ಇಲ್ಲಿದೆ ಡಿಟೇಲ್ಸ್.

ಶಿವಮೊಗ್ಗ, [ಅ.16]: ರಾಜ್ಯದಲ್ಲಿ ಎದುರಾಗಿರುವ 3 ಲೋಕಸಭಾ ಹಾಗೂ 2 ವಿಧಾನಸಭಾ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರತೊಡಗಿದೆ. 

ಅದರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾಗಿರುವ ಶಿವಮೊಗ್ಗ ಲೋಕಸಭಾ ಉಪ ಸಮರ ರಾಜ್ಯದ ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರ ಕಾಳಗಕ್ಕೆ ಸಾಕ್ಷಿಯಾಗಿದೆ. 

ಶಿವಮೊಗ್ಗದಲ್ಲಿ 3 ಮಾಜಿ ಸಿಎಂ ಪುತ್ರರ ಕದನ: ಗೆಲ್ಲೋರ್‍ಯಾರು..?

ಮಾಜಿ ಸಿಎಂ ಬಿಎಸ್‌ವೈ ಪುತ್ರ ರಾಘವೇಂದ್ರ, ಜೆ.ಎಚ್ ಪಟೇಲ್ ಮಗ ಮಹೀಮಾ ಪಟೇಲ್ ಹಾಗೂ ಕುಮಾರ್ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರ ಮಾಜಿ ಶಾಸಕ ಮಧು ಬಂಗಾರಪ್ಪ ಇಂದು [ಮಂಗಳವಾರ] ಜೆಡಿಎಸ್ ಹಾಗೂ ಕಾಂಗ್ರೆಸ್ ಒಮ್ಮತದ ಮೈತ್ರಿ ಅಭ್ಯರ್ಥಿಯಾಗಿ  ನಾಮಪತ್ರ ಸಲ್ಲಿಸಿದರು.

ಈ ವೇಳೇ ಸಿಎಂ ಕುಮಾರಸ್ವಾಮಿ. ಸಚಿವ ಡಿ.ಸಿ. ತಮಣ್ಣ, ಕಾಂಗ್ರೆಸ್ ಮುಖಂಡರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ ಅವರು ಮಧು ಬಂಗಾರಪ್ಪಗೆ ಸಾಥ್  ನೀಡಿದರು.

ಬಾಮೈದಾ ಪರ ಶಿವಣ್ಣ ಪ್ರಚಾರ ಮಾಡ್ತಾರಾ?
ನಟ ಡಾ. ಶಿವರಾಜ್ ಕುಮಾರ್ ಅವರು ತಮ್ಮ ಬಾಮೈದಾ  ಮಧು ಬಂಗಾರಪ್ಪ ಪರ ಪ್ರಚಾರ ಮಾಡ್ತಾರಾ  ಅಥವಾ ಇಲ್ಲ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ಗೀತಾ ಶಿವರಾಜ್ ಕುಮಾರ್ ಚುನಾವಣೆಯಲ್ಲಿ ಪಾಲ್ಗೊಳ್ಳುತ್ತಾರೆ, ಆದರೆ ಶಿವರಾಜ್ ಕುಮಾರ್ ಬರುವುದಿಲ್ಲ. ಶಿವಣ್ಣನಿಗೆ ಎಲ್ಲಾ ಪಕ್ಷದ ಅಭಿಮಾನಿಗಳಿರುವುದರಿಂದ ನೇರವಾಗಿ ಅವರು ಪ್ರಚಾರಕ್ಕೆ ಬರುವುದಿಲ್ಲ ಎಂದು ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದರು. 

 ಶಿವರಾಜ್ ಕುಮಾರ್ ಸಹಕಾರ ಇರುತ್ತದೆ .ಇವತ್ತು ಗೀತಕ್ಕ ಬರಬೇಕಾಗಿತ್ತು ಆದರೆ ಶಿವರಾಜ್ ಕುಮಾರ್ ಆಸ್ಪತ್ರೆಯಲ್ಲಿರುವುದರಿಂದ ಬರುವುದಕ್ಕೆ ಆಗಲಿಲ್ಲ ಎಂದರು.

click me!