ಕಾವೇರಿ ತೀರ್ಥೋದ್ಭವಕ್ಕೆ ಸಾಕ್ಷಿಯಾಗ್ತಿರೋ ಮೊದಲ ಸಿಎಂ ಎಚ್‌ಡಿಕೆ

By Web DeskFirst Published Oct 16, 2018, 4:52 PM IST
Highlights

 ತೀರ್ಥೋದ್ಭವದಂದು ತಲಕಾವೇರಿಗೆ ಭೇಟಿ ನೀಡಲಿರುವ ಸಿಎಂ ಎಚ್‌ಡಿ ಕುಮಾರಸ್ವಾಮಿ ಆಗಮನ ಐತಿಹಾಸಿಕ ದಾಖಲೆಯಾಗಲಿದೆ. 

ಕೊಡಗು, [ಅ.16]: ಜನರ ಜೀವ ನದಿ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಪುಣ್ಯ ಕ್ಷಣಕ್ಕೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸಾಕ್ಷಿಯಾಗಲಿದ್ದಾರೆ.

ಇತಿಹಾಸದಲ್ಲಿ ಇದುವರೆಗೂ ಕಾವೇರಿ ತೀರ್ಥೋದ್ಭವಕ್ಕೆ ಇವರೆಗೆ ರಾಜ್ಯದ ಯಾವೊಬ್ಬ ಸಿಎಂ ಸಾಕ್ಷಿಯಾಗದಿರೋದ್ರಿಂದ ಕುಮಾರಸ್ವಾಮಿ ಅವರ ಭೇಟಿ ಮಹತ್ವ ಪಡೆದಿದೆ. 

ನಾಳೆ [ಬುಧವಾರ] ಸಂಜೆ 6.43ರ ಮೇಷ ಲಗ್ನದಲ್ಲಿ ತಾಯಿ ಕಾವೇರಿ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ. ಇಂತಹ ಪವಿತ್ರ ಕ್ಷಣವನ್ನ ಕಣ್ತುಂಬಿಕೊಳ್ಳೋಕೆ ನಾಡ ದೊರೆ ಆಗಮಿಸ್ತಿರೋದು ಮಹತ್ವ ಪಡೆದಿದೆ.

 ತೀರ್ಥೋದ್ಭವದಂದು ತಲಕಾವೇರಿಗೆ ಭೇಟಿ ನೀಡಲಿರುವ ಎಚ್‌ಡಿ ಕುಮಾರಸ್ವಾಮಿ ಆಗಮನ ಐತಿಹಾಸಿಕ ದಾಖಲೆಯಾಗಲಿದೆ. ಇನ್ನೂ ತಲಕಾವೇರಿಗೆ ಭೇಟಿ ನೀಡಿದ್ರೆ ಸಿಎಂ ಪಟ್ಟ ಕಳೆದುಕೊಳ್ತಾರೆ ಅನ್ನೋ 49 ವರ್ಷಗಳ ಮೂಡನಂಬಿಕೆಯ ನಡುವೆ ಕುಮಾರಸ್ವಾಮಿ ಜುಲೈ 2೦ರಂದು ಭಾಗಮಂಡಲ ತಲಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಿದ್ರು. 

ಇದಾದ ಬಳಿಕ ನಾಳಿನ ತೀರ್ಥೋದ್ಭವದಲ್ಲಿ ಭಾಗಿಯಾಗುತ್ತಿರೋ ಸಿಎಂ 3 ತಿಂಗಳಲ್ಲಿ 2ನೇ ಬಾರಿಗೆ ಕ್ಷೇತ್ರದ ದರ್ಶನ ಮಾಡ್ತಿರೋದು ವಿಶೇಷ.

ತೀರ್ಥೋದ್ಭವಕ್ಕೂ ಮುನ್ನ ಕೊಡಗಿಗೆ ಭೇಟಿ ನೀಡ್ತಿರೋ ಸಿಎಂ ಕುಮಾರಸ್ವಾಮಿ ಅವರು ನಾಳೆ ಬೆಳಗ್ಗೆ 11.30ಕ್ಕೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಜನರನ್ನು ಭೇಟಿ ಮಾಡಿ, ಸಮಸ್ಯೆ ಆಲಿಸಲಿದ್ದಾರೆ. 

ಬಳಿಕ ಪುನರ್ವಸತಿ ಕಾರ್ಯದ ಪ್ರಗತಿಯ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದು ಸಲಹೆ ಸೂಚನೆ ನೀಡಲಿದ್ದಾರೆ. 

click me!