
ಬೆಂಗಳೂರು[ನ.20] ಕಬ್ಬು ಬೆಳೆಗಾರರ ಬೃಹತ್ ಹೋರಾಟಕ್ಕೆ ಬೆದರಿದ ಸರ್ಕಾರ ರೈತರೊಂದಿಗೆ ಮಹತ್ವದ ಸಭೆ ನಡೆಸಿತು. ಆದರೆ ಸಭೆಗೆ ಬಹುತೇಕ ಸಕ್ಕರೆ ಕಾರ್ಖಾನೆ ಮಾಲೀಕರು ಬರಲೇ ಇಲ್ಲ. ಇದರ ಮಧ್ಯೆಯೇ ರೈತರು ಸಿಎಂ ಎದುರು ತಮ್ಮ ಬೇಡಿಕೆಗಳ ಸರಮಾಲೆ ಇಟ್ಟರು.
ಕಬ್ಬಿನ ಎಲ್ಲಾ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕು. ಟನ್ ಕಬ್ಬಿಗೆ 3,500 ದರ ನಿಗದಿಪಡಿಸಬೇಕು. ಮಂಡ್ಯದ ಮೈಶುಗರ್ಸ್ ಕಾರ್ಖಾನೆ ಪುನಶ್ಚೇತನಗೊಳಿಸ್ಬೇಕು. ಕಬ್ಬು ಬೆಳೆಗಾರರ ಮೇಲಿನ ಕ್ರಿಮಿನಲ್ ಪ್ರಕರಣ ಹಿಂಪಡೆಯಬೇಕು. ಬರಪೀಡಿತ ಪ್ರತಿ ಕೃಷಿ ಕುಟುಂಬಕ್ಕೆ 10 ಸಾವಿರ ಜೀವನ ಭತ್ಯೆ ನೀಡಬೇಕು. ಕನ್ನಂಬಾಡಿ ಅಣೆಕಟ್ಟುಉಳಿಸಲು ಸುತ್ತಮುತ್ತ ಗಣಿಗಾರಿಕೆ ನಿಷೇಧ ಮಾಡ್ಬೇಕು. ರೈತರಿಗೆ ಬಗರ್ ಹುಕಂ ಸಾಗುವಳಿ ಹಕ್ಕುಪತ್ರ ನೀಡಬೇಕು ಎಂಬ ಪ್ರಮುಖಬೇಡಿಕೆಗಳನ್ನು ಇಟ್ಟರು.
ಈ ಚೆಂದಕ್ಕೆ ನಿಮ್ಗೆ ಮಿನಿಸ್ಟರ್ ಗಿರಿ ಬೇಕಾ ಜಾರಕಿಹೊಳಿ ಸಾಹೇಬ್ರೇ..?
ಸಭೆ ತೆಗೆದುಕೊಂಡ ನಿರ್ಣಯಗಳೇನು?
*ಎಫ್ಆರ್ ಪಿ ದರದಲ್ಲೇ ಕಬ್ಬು ಖರೀದಿ ಮಾಡಬೇಕು
* 450 ಕೋಟಿ ಬಾಕಿ 3 ತಿಂಗಳೊಳಗೆ ಪಾವತಿ ಆಗಬೇಕು
* ನಾಳೆಯಿಂದಲೇ ಕಬ್ಬು ಅರೆಯುವ ಕಾರ್ಯ ಆರಂಭಿಸಿ
* ಮಹಾರಾಷ್ಟ್ರ ಮಾದರಿಯಲ್ಲಿ ಕಬ್ಬು ಖರೀದಿಗೆ ಚಿಂತನೆ
* ಸಕ್ಕರೆ ಕಾರ್ಖಾನೆ ಮಾಲೀಕರನ್ನ ನಿಯಂತ್ರಿಸಲು ವಿಧೇಯಕ ಜಾರಿ
ಕಾರ್ಖಾನೆಗಳಲ್ಲಿ ಡಿಜಿಟಲ್ ಯಂತ್ರೋಪಕರಣ ಅಳವಡಿಕೆ
* ಕಾರ್ಖಾನೆಗಳ ವಾರ್ಷಿಕ ಲಾಭದಲ್ಲಿ ರೈತರಿಗೂ ಶೇರ್ ನೀಡಬೇಕು
*ನವೆಂಬರ್ 22 ರಂದು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಇನ್ನೊಂದು ಸಭೆ
ಸಭೆ ನಡೆಯುವ ಒಂದು ಹಂತದಲ್ಲಿ ಸಕ್ಕರೆ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ರು. ನೀವು ಬ್ಯುಸಿನಸ್, ಕೈಗಾರಿಕೆಗಳನ್ನಷ್ಟೇ ನೋಡಿಕೊಳ್ತಿರಲ್ಲ. ರೈತರ ಕಡೆಗೂ ಸ್ವಲ್ಪ ನೋಡ್ರಿ.. ಸಕ್ಕರೆಖಾತೆ ನಿಮ್ಮ ಬಳಿ ಇದೆ ಅನ್ನೋ ಜ್ಞಾನ ನಿಮಗಿದ್ದರೆ, ಇಷ್ಟರೊಳಗೆ ಬೆಂಬಲ ಬೆಲೆ ಘೋಷಿಸ್ತಿದ್ರಿ ಅಂತ ಕೂಗಾಡಿದ್ರು. ಅಲ್ಲದೇ ಸಿಎಂ ಮಾತಿನ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಸಭೆ ಮುಗಿದಿದೆ, ರೈತರಿಗೆ ಒಂದಿಷ್ಟು ಭರವಸೆ ಸಿಕ್ಕಿದೆ. ನಿಜಕ್ಕೂ ಇನ್ನು ಮುಂದೆ ಸಕ್ಕರೆ ಕಾರ್ಖಾನೆ ಮಾಲೀಕರು ಯಾವ ರೀತಿ ನಡೆದುಕೊಳ್ಳುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಮತ್ತೆ ಅವರು ಹಳೆ ರಾಗವನ್ನೇ ಹಾಡಿದರೆ ರೈತ ಹೋರಾಟ ಬೆಳಗಾವಿ ಅಧಿವೇಶನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.