ಸಚಿವ ಸ್ಥಾನ ಹಂಚಿಕೆ ಒಂದು ವಾರ ಮುಂದಕ್ಕೆ : ಹಿಂದಿದೆಯಾ BSY ಪ್ಲಾನ್?

By Web DeskFirst Published Aug 1, 2019, 11:38 AM IST
Highlights

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಒಂದು ವಾರ ಕಳೆದರು ಕೂಡ ಸಂಪುಟ ವಿಸ್ತರಣೆಯಾಗಿಲ್ಲ. ಆದರೆ ಇದರ ಹಿಂದೆ ಪ್ಲಾನ್ ಕೂಡ ಇದೆ ಎನ್ನಲಾಗುತ್ತಿದೆ. 

ಬೆಂಗಳೂರು [ಆ.01]: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿ ಒಂದು ವಾರಗಳು ಕಳೆಯುತ್ತಾ ಬಂದರೂ ಕೂಡ ಇನ್ನೂ ಸಂಪುಟ ವಿಸ್ತರಣೆಯಾಗಿಲ್ಲ. 

ಆಗಸ್ಟ್ 5 ರಂದು ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿ ಬಿಜೆಪಿ ಹೈ ಕಮಾಂಡ್ ಭೇಟಿ ಮಾಡಲಿದ್ದು, ಹೈ ಕಮಾಂಡ್ ಒಪ್ಪಿಗೆ ಬಳಿಕವೇ ಸಚಿವ ಸಂಪುಟ ರಚನೆ ಮಾಡಲಿದ್ದಾರೆ.  ಇದರಿಂದ ಇನ್ನೊಂದು ವಾರಗಳ ಕಾಲ ಕಾಯುವುದು ಅನಿವಾರ್ಯವಾಗಿದೆ. 

ಇಬ್ಬರಲ್ಲಿ ಯಾರಿಗೆ ಒಲಿಯುತ್ತೆ BSY ಸಂಪುಟದಲ್ಲಿ DCM ಸ್ಥಾನ?

ರಾಜ್ಯದ ಸಚಿವರ ಪಟ್ಟಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಂದ ಒಪ್ಪಿಗೆ ದೊರೆಯಬೇಕಿದೆ. ಸದ್ಯ ಲೋಕಸಭಾ ಅಧಿವೇಶನ ನಡೆಯುತ್ತಿದ್ದು ಇದರಿಂದ ಕೇಂದ್ರದ ನಾಯಕರ ಭೇಟಿ ಅಸಾಧ್ಯವಾಗಿದೆ. ಇಷ್ಟೇ ಅಲ್ಲದೇ ಅನರ್ಹ ಶಾಸಕರ ವಿಚಾರಣೆ ಬಗ್ಗೆ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ ಎನ್ನಲಾಗಿದೆ. 

ಮುಂದಿನ ವಾರ ಸಂಪುಟ ವಿಸ್ತರಣೆ : ಉತ್ತಮ ಸಚಿವ ಸಂಪುಟವನ್ನು ರಚನೆ ಮಾಡುವ ಜವಾಬ್ದಾರಿಯನ್ನು ಬಿ ಎಸ್ ವೈ ಹೊತ್ತುಕೊಂಡಿದ್ದು, ಲಾಬಿ ಮಾಡುವವರಿಗೆ ಸ್ಥಾನ ನೀಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 

ಕಾಂಗ್ರೆಸ್ ಅನರ್ಹ ಶಾಸಕರಿಗೆ BSY ಸಂಪುಟದಲ್ಲಿ ಸಚಿವ ಸ್ಥಾನ ಫಿಕ್ಸ್

ಅಲ್ಲದೇ ಎಷ್ಟೇ ದಿನಗಳಾದರೂ ಕೂಡ ಕೇಂದ್ರದ ನಾಯಕರ ಅನುಮತಿಯನ್ನು ಪಡೆದುಕೊಂಡು ಸಂಪುಟ ರಚನೆ ಮಾಡಲು ನಿರ್ಧರಿಸಿದ್ದಾರೆ. ಇದರಿಂದ ಒಂದು ವಾರಗಳ ಕಾಲ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.

click me!