ಕಾಂಗ್ರೆಸ್‌ಗೆ ಹಂಗಾಮಿ ಅಧ್ಯಕ್ಷ?: ಯಾರಿದ್ದಾರೆ ರೇಸಲ್ಲಿ?

By Web DeskFirst Published Aug 1, 2019, 11:15 AM IST
Highlights

ಈ ವಾರ ಕಾಂಗ್ರೆಸ್‌ಗೆ ಹಂಗಾಮಿ ಅಧ್ಯಕ್ಷ?| ಸಚಿನ್‌, ಸಿಂಧಿಯಾ, ವೇಣುಗೋಪಾಲ್‌ ರೇಸಲ್ಲಿ| ಚುನಾವಣೆ ನಡೆಸಿ ಪೂರ್ಣಾವಧಿ ಅಧ್ಯಕ್ಷರ ಆಯ್ಕೆ

ನವದೆಹಲಿ[ಆ.: ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ರಾಹುಲ್‌ ಗಾಂಧಿ ಅವರ ರಾಜೀನಾಮೆಯ ಬಳಿಕ ಪರ್ಯಾಯ ನಾಯಕನ ಆಯ್ಕೆ ವಿಳಂಬ ಆಗುತ್ತಿರುವುದಕ್ಕೆ ಪಕ್ಷದ ನಾಯಕರಲ್ಲಿ ಅಸಮಾಧಾನ ಹೆಚ್ಚುತ್ತಿರುವ ಬೆನ್ನಲ್ಲೇ, ಈ ವಾರ ಕಾಂಗ್ರೆಸ್‌ಗೆ ಹಂಗಾಮಿ ಅಧ್ಯಕ್ಷರೊಬ್ಬರು ನೇಮಕಗೊಳ್ಳುವ ಸಾಧ್ಯತೆ ಇದೆ.

"

ತಮ್ಮ ರಾಜೀನಾಮೆಯಿಂದ ತೆರವಾಗಿರುವ ಅಧ್ಯಕ್ಷ ಹುದ್ದೆಗೆ ಪರ್ಯಾಯ ನಾಯಕರನ್ನು ಆಯ್ಕೆ ತ್ವರಿತ ನಿರ್ಧಾರ ಕೈಗೊಳ್ಳುವ ಬಗ್ಗೆ ರಾಹುಲ್‌ ಗಾಂಧಿ, ಮಂಗಳವಾರ ಸುಳಿವು ನೀಡಿದ್ದಾರೆ. ಆದರೆ, ತಮ್ಮ ಸೋದರಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಕುಟುಂಬದ ಸದಸ್ಯರಲ್ಲಿ ಒಬ್ಬರನ್ನು ಅಧ್ಯಕ್ಷ ಹುದ್ದೆಗೆ ನೇಮಿಸುವುದನ್ನು ರಾಹುಲ್‌ ಗಾಂಧಿ ತಳ್ಳಿಹಾಕಿದ್ದಾರೆ.

ಹಿರಿಯ ನಾಯಕರಾದ ಅಮರೀಂದರ್‌ ಸಿಂಗ್‌, ಕರಣ್‌ ಸಿಂಗ್‌ ಮತ್ತು ಶಶಿ ತರೂರ್‌, ಲೋಕಸಭೆ ಚುನಾವಣೆಯ ವೇಳೆ ಪ್ರಭಾವ ಗಮನ ಸೆಳೆದಿದ್ದು, ಅಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಹಂಗಾಮಿ ಅಧ್ಯಕ್ಷರ ಹುದ್ದೆಗೆ ಸಚಿನ್‌ ಪೈಲಟ್‌, ಅಶೋಕ್‌ ಗೆಹ್ಲೋಟ್‌, ಜ್ಯೋತಿರಾದಿತ್ಯ ಸಿಂಧಿಯಾ, ಸುಶಿಲ್‌ ಕುಮಾರ್‌ ಸಿಂಧೆ, ಕೆ.ಸಿ. ವೇಣುಗೋಪಾಲ್‌ ಅವರ ಹೆಸರು ಕೇಳಿಬಂದಿದೆ.

ಈ ವಾರ ಹಂಗಾಮಿ ಅಧ್ಯಕ್ಷರು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಪಕ್ಷದ ಅಧ್ಯಕ್ಷರ ಹುದ್ದೆಗೆ ಚುನಾವಣೆ ನಡೆದು ಸಿಡಬ್ಲ್ಯುಸಿ ಸಭೆಯಲ್ಲಿ ಅಧಿಕೃತವಾಗಿ ಹೆಸರನ್ನು ಘೋಷಿಸುವುದಕ್ಕಿಂತಲೂ ಮುನ್ನ ಇದು ಮೊದಲ ಹೆಜ್ಜೆಯಾಗಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

click me!