ರಾಜ್ಯದಲ್ಲಿ ಗಂಟೆಗೆ ಒಂದರಂತೆ ರಾಜಕಾರಣದ ಬೆಳವಣಿಗೆ ನಡೆಯುತ್ತಿದೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ವಿದೇಶ ಪ್ರವಾಸದಲ್ಲಿದ್ದಾರೆ. ಸಿದ್ದರಾಮಯ್ಯ ವಿದೇಶದಿಂದ ಹಿಂದಕ್ಕೆ ಬಂದ ಮೇಲೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ.
ಬೆಂಗಳೂರು(ಸೆ.13) ಸಿದ್ದರಾಮಯ್ಯ ವಾಪಸ್ ಆದ ಬಳಿಕ ಸಂಪುಟ ವಿಸ್ತರಣೆ ಆಗುವುದು ಬಹುತೇಕ ಪಕ್ಕಾ ಆಗಿದೆ. ಖಾಲಿ ಇರುವ 6 ರಲ್ಲಿ ನಾಲ್ಕು ಸ್ಥಾನ ತುಂಬಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ.
ಈಗಿರುವ ರಾಜಕಾರಣದ ಕ್ಷಿಪ್ರ ಬೆಳವಣಿಗೆ ಗಮನಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು ಇಂಥ ಆಲೋಚನೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ಮುಂದೂಡಿದರೇ ಅತೃಪ್ತ ಶಾಸಕರೆಲ್ಲಾ ಒಂದಾಗುವ ಭೀತಿ ಸಹ ಕಾಂಗ್ರೆಸ್ ಪಕ್ಷಕ್ಕೆ ಕಾಡುತ್ತಿದೆ.
ಇನ್ನೊಂದು ಕಡೆ ಸಚಿವ ಆಕಾಂಕ್ಷಿಗಳನ್ನ ಭೇಟಿ ಮಾಡ್ತಿರುವ ರಮೇಶ್ ಜಾರಕಿಹೊಳಿ ತಮ್ಮ ತಂತ್ರಕ್ಕೆ ಬಲ ತುಂಬಿಕೊಳ್ಳುತ್ತಿದ್ದಾರೆ. ಬಳ್ಳಾರಿಯ ಐವರು ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗುವ ಮಾಹಿತಿ ಕೆಪಿಸಿಸಿ ಅಧ್ಯಕ್ಷರಿಗೂ ಲಭ್ಯವಾಗಿದೆ.
ನಿನ್ನೆ ಬಳ್ಳಾರಿ ಶಾಸಕರೊಂದಿಗೆ ದಿನೇಶ್ ಗುಂಡೂರಾವ್ ಒಂದು ಹಂತದ ಮಾರುಕತೆಯನ್ನು ಆಡಿದ್ದಾರೆ. ಬಳ್ಳಾರಿಯ ಶಾಸಕರಿಗೆ ಯಾರಿಗಾದ್ರು ಒಬ್ಬರಬ್ನ ಸಚಿವರನ್ನಾಗಿ ಮಾಡಿ ಬಳ್ಳಾರಿ ಉಸ್ತುವಾರಿಯನ್ನ ಅವರಿಗೆ ನೀಡುವಂತೆ ಬಳ್ಳಾರಿ ಶಾಸಕರು ಮನವಿ ಮಾಡಿದ್ದಾರೆ.
ಇನ್ನೊಂದು ಕಡೆ ನಾವು ಹೇಳಿದ ವಾಲ್ಮೀಕಿ ಸಮುದಾಯದ ಬಳ್ಳಾರಿ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಲು ರಮೇಶ್ ಜಾರಕಿಹೊಳಿ ಕೂಡಾ ಪಟ್ಟು ಹಿಡಿದು ನಿಂತಿದ್ದಾರೆ. ಹಾಗಾಗಿ ಶೀಘ್ರದಲ್ಲಿ ಸಂಪುಟ ವಿಸ್ತರಣೆ ಮಾಡುವಂತೆ ಕೆ.ಸಿ ವೇಣುಗೋಪಾಲ್ ಜೊತೆ ಚರ್ಚಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ವಾಪಸ್ ಆಗುವುದನ್ನೇ ಕಾಯುತ್ತಿದ್ದಾರೆ.