ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ : JDS ನಲ್ಲಿ ಊಹಿಸದ ಬೆಳವಣಿಗೆ

By Web DeskFirst Published Aug 2, 2019, 11:16 AM IST
Highlights

ರಾಜ್ಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಯೊಂದು ನಡೆಯುತ್ತಿದೆ. ಜೆಡಿಎಸ್ ನಲ್ಲಿ ಯಾರೂ ಊಹಿಸದಂತಹ ಬೆಳವಣಿಗೆಯಾಗುತ್ತಿದ್ದು, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ದೇವೇಗೌಡರು ಸಿದ್ಧರಾಗಿದ್ದಾರೆ. 

ಬೆಂಗಳೂರು [ಆ.02]: JDS ನಲ್ಲಿ ಯಾರೂ ಊಹಿಸದಂತಹ ಬೆಳವಣಿಗೆಯೊಂದು ನಡೆಯುತ್ತಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಸಿದ್ಧರಾಗಿದ್ದಾರೆ. 

ಅನರ್ಹ ಶಾಸಕ ಎಚ್.ವಿಶ್ವನಾಥ್ ಗೆ ಠಕ್ಕರ್ ನೀಡಲು ದೇವೇಗೌಡರು ತಂತ್ರ ರೂಪಿಸಿದ್ದು, ರಾಜ್ಯ ರಾಜಕೀಯಕ್ಕೆ ಹಾಸನ ಸಂಸದರಾಗಿರುವ ಪ್ರಜ್ವಲ್ ರೇವಣ್ಣ ಕರೆತರುವ ಯತ್ನ ನಡೆದಿದೆ ಎನ್ನಲಾಗುತ್ತಿದೆ. 

ಕಾರ್ಯಕರ್ತರ ಮಾತಿಗೆ ಕಟ್ಟುಬಿದ್ದು ಉಪಚುನಾವಣೆಗೆ ಗೌಡರ ಹೊಸ ನಿರ್ಧಾರ?

 ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಪ್ರಜ್ವಲ್ ನಿಲ್ಲಿಸಲು ತಯಾರಿಯಾಗಿದ್ದು, ಒಂದು ವೇಳೆ ಹೀಗಾದಲ್ಲಿ ಹಾಸನ ಲೋಕಸಭಾ ಕ್ಷೇತ್ರ ಖಾಲಿಯಾಗಲಿದ್ದು, ಇಲ್ಲಿಂದ ದೇವೇಗೌಡರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ವಿಶ್ವನಾಥ್ ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಆದರೆ ತೃಪ್ತರಾಗಿ ರಾಜೀನಾಮೆ ನೀಡಿ ಹೊರ ನಡೆದ ಅವರನ್ನು ಅನರ್ಹನ್ನಾಗಿಸಿ ಉಚ್ಛಾಟನೆ ಮಾಡಲಾಯ್ತು. 

ಅಳಲು ತೋಡಿಕೊಳ್ಳಲು ಹೋದ ದೇವೇಗೌಡ್ರಿಗೆ ಮುಖಭಂಗ!

ಈ ನಿಟ್ಟಿನಲ್ಲಿ ಹಿಂದಿನಿಂದಲೂ ಕೂಡ ರಾಜ್ಯ ರಾಜಕಾರಣದಲ್ಲಿ ಒಲವು ಹೊಂದಿದ್ದ ಪ್ರಜ್ವಲ್ ರೇವಣ್ಣರನ್ನು ಹುಣಸೂರು ಕ್ಷೇತ್ರದಿಂದ ನಿಲ್ಲಿಸಲು ತಯಾರಿ ನಡೆದಿದೆ ಎನ್ನಲಾಗಿದೆ. 

ಕಳೆದ ಚುನಾವಣೆಯಲ್ಲಿಯೇ ಸ್ಪರ್ಧೆಗೆ ವೇದಿಕೆ ಸಿದ್ಧವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಅವಕಾಶ ಕೈ ತಪ್ಪಿತ್ತು. ಬಳಿಕ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. 

click me!