ಅಭ್ಯರ್ಥಿಗಿಂತ ಹೆಚ್ಚು ನೋಟಾ, ರಾಜಕೀಯ ಪಕ್ಷಗಳಿಗೆ ಖಡಕ್ ಸೂಚನೆ

By Web DeskFirst Published Nov 6, 2018, 2:08 PM IST
Highlights

ಶಿವಮೊಗ್ಗದಲ್ಲಿ ಕಮಲ ಅರಳಿದೆ. ಆದರೆ ಕಮಲ ಪ್ರಯಾಸದಿಂದ ಗೆಲುವು ಸಾಧಿಸಿದೆ. ರಾಘವೇಂದ್ರ ಮತ್ತೊಮ್ಮೆ ಲೋಕಸಭೆ ಪ್ರವೇಶ ಮಾಡಿದ್ದಾರೆ. ಆದರೆ ಇದೆಲ್ಲದಕ್ಕಿಂತ ಮುಖ್ಯವಾಗಿ ಶಿವಮೊಗ್ಗದಲ್ಲಿ ನೋಟಾ ಮತಗಳು ಪ್ರಾಮುಖ್ಯ ಗಳಿಸಿವೆ.

ಶಿವಮೊಗ್ಗ(ನ.06) ಬಿಎಸ್ ಯಡಿಯೂರಪ್ಪ ಮತ್ತಿ ದೋಸ್ತಿ ಸರಕಾರದ ಪ್ರತಿಷ್ಠೆ ಕಣದಲ್ಲಿ ಅಂತಿಮವಾಗಿ ಜಯ ಬಿಎಸ್ ವೈ ಪಾಲಾಗಿದೆ. ಆದರೆ ಬಿಜೆಪಿ ಇಷ್ಟಕ್ಕೆ ನಿಟ್ಟುಸಿರು ಬಿಡುವಂತೆ ಇಲ್ಲ.

ರಾಘವೇಂದ್ರ 5,43,306, ದೋಸ್ತಿ ಸರಕಾರದ ಮಧು ಬಂಗಾರಪ್ಪ 4,91,158 ಮತ್ತು ಜೆಡಿಯುನ  ಮಹಿಮಾ ಪಟೇಲ್ 8713 ಮತಗಳನ್ನು ಪಡೆದುಕೊಂಡಿದ್ದಾರೆ. ಆದರೆ ಇದೆಲ್ಲದಕ್ಕಿಂತ ಮುಖ್ಯವಾಗಿ ಮೇಲಿನ  ಆಯ್ಕೆಯಲ್ಲಿ ಯಾರೂ ಸರಿ ಇಲ್ಲ ಎಂಬ ನೋಟಾ ಮತಗಳ ಸಂಖ್ಯೆ ನಿಬ್ಬೆರಗಾಗಿಸುತ್ತಿದೆ.  10687  ನೋಟಾ ಮತಗಳು ಶಿವಮೊಗ್ಗದಲ್ಲಿ ಚಲಾವಣೆಯಾಗಿದೆ. ಅಂದರೆ ಪ್ರಮುಖ ರಾಜಕೀಯ ಪಕ್ಷ ಜೆಡಿಯುಗಿಂತ ನೋಟಾ ಮತಗಳೆ ಹೆಚ್ಚಿದೆ.

ಶಿವಮೊಗ್ಗದಲ್ಲಿ ಅರಳಿತು ಕಮಲ; ಬಾಡಿತು ತೆನೆ

ನೋಟಾ ಮತಗಳಿಗೆ ಸಂವಿಧಾನ ಇನ್ನು ಮುಂದೆ ಯಾವ ಬಗೆಯ ಮಾನ್ಯತೆ ನೀಡುತ್ತದೆ ಎಂಬ ಪ್ರಶ್ನೆ ಸಹ ಎದುರಾಗಿದೆ. ಜನರಿಗೆ ಸದ್ಯದ ರಾಜಕಾರಣದ ಬಗ್ಗೆ ಅಸಹನೆ ವ್ಯಕ್ತವಾಗುತ್ತಿರುವುದನ್ನು ಈ ನೋಟಾ ಮತಗಳ  ಲೆಕ್ಕದಿಂದ ಅರಿತುಕೊಳ್ಳಬಹುದಾಗಿದೆ.

click me!