
ನವದೆಹಲಿ : ಸದ್ಯ ದೇಶದಲ್ಲಿ ರಾಮಮಂದಿರ ನಿರ್ಮಾಣ ವಿಚಾರ ಗರಿಗೆದರಿದ್ದು, ಚರ್ಚೆಗೆ ಗ್ರಾಸವಾಗುತ್ತಿದೆ. ಇದೇ ವೇಳೆ ಅಯೋಧ್ಯೆ ಬಾಬ್ರಿ ಮಸೀದಿ ವಿಚಾರವಾಗಿ ದಿಲ್ಲಿ ವಿದ್ಯಾರ್ಥಿಯೋರ್ವ ಉತ್ಖನನದ ದೇವಾಲಯದ ಕುರುಹು ಪತ್ತೆಯಾಗಿತ್ತು ಎಂದು ಹೇಳಿದ್ದಾರೆ.
ವಿದ್ಯಾರ್ಥಿಯಾಗಿದ್ದ ವೇಳೆ ಬಿ.ಬಿ. ಲಾಲ್ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಉತ್ಖನನ ನಡೆಸಿದ್ದು, ಈ ತಂಡದಲ್ಲಿ ತಾನೂ ಕೂಡ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದು, ಮಸೀದಿ ಜಾಗದಲ್ಲಿ ದೇವಾಲಯ ನಿರ್ಮಾಣ ಮಾಡಿದ್ದ ಇಟ್ಟಿಗೆಗಳು ಪತ್ತೆಯಾಗಿತ್ತು ಎಂದು ಹೇಳಿದ್ದಾರೆ.
ಈ ಸತ್ಯವನ್ನು ನಮ್ಮ ಇತಿಹಾಸ ಹಾಗೂ ಪ್ರಾಚ್ಯ ವಸ್ತುಗಳ ಬಗ್ಗೆ ಇದ್ದ ಜ್ಞಾನದಿಂದ ಪತ್ತೆ ಹಚ್ಚಿದ್ದಾಗಿ ಅವರು ಹೇಳಿದ್ದಾರೆ.
ದೇವಾಲಯದ ನಿರ್ಮಾಣಕ್ಕೆ ಹಾಕಿದ್ದ ಕಂಬಗಳನ್ನೇ ಸೇರಿಸಿ ಮಸೀದಿ ನಿರ್ಮಾಣ ಮಾಡಲಾಗಿದೆ ಎನ್ನುವ ವಿಚಾರ ಈ ವೇಳೆ ತಿಳಿದು ಬಂದಿತ್ತು. ಪೂರ್ಣ ಕಳಸವೂ ಕಂಡು ಬಂದಿದ್ದು ದೇವಾಲಯದ ನಿರ್ಮಾಣಕ್ಕೆ 11 ಹಾಗೂ 12ನೇ ಶತನಮಾನದಲ್ಲಿ ಈ ರೀತಿಯಾಗಿ ಮಾಡುವುದು ಸಂಪ್ರದಾಯವಾಗಿತ್ತು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ