ಕರ್ನಾಟಕ ಬಂದ್: ಇಂದು ಏನೇನಿದೆ? ಯಾವ ಸೇವೆ ಇಲ್ಲ? ಇಲ್ಲಿದೆ ವಿವರ

By Suvarna Web DeskFirst Published Jun 12, 2017, 8:14 AM IST
Highlights

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಆದ್ರೆ ಬಂದ್‌ಗೆ ಕೆಲ ಸಂಘಟನೆಗಳು ಬೆಂಬಲ ನೀಡಿದ್ರೆ, ಕೆಲವೊಂದು ಸಂಘಟನೆಗಳು ಬೆಂಬಲ ನಿರಾಕರಿಸಿವೆ. ಹೀಗಾಗಿ ಇಂದು ಬಂದ್ ನಡೆಯುತ್ತದಾ ಇಲ್ಲವಾ ಎನ್ನುವುದೇ ಅನುಮಾನ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕಾಗುತ್ತದೆ. ಹೀಗಾಗಿ ಇಂದು ಏನೇನು ಇರುತ್ತದೆ ಎನೇನು ಇರುವುದಿಲ್ಲ ಇಲ್ಲಿದೆ ವಿವರ.

ಬೆಂಗಳೂರು(ಜೂ.12): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಆದ್ರೆ ಬಂದ್‌ಗೆ ಕೆಲ ಸಂಘಟನೆಗಳು ಬೆಂಬಲ ನೀಡಿದ್ರೆ, ಕೆಲವೊಂದು ಸಂಘಟನೆಗಳು ಬೆಂಬಲ ನಿರಾಕರಿಸಿವೆ. ಹೀಗಾಗಿ ಇಂದು ಬಂದ್ ನಡೆಯುತ್ತದಾ ಇಲ್ಲವಾ ಎನ್ನುವುದೇ ಅನುಮಾನ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕಾಗುತ್ತದೆ. ಹೀಗಾಗಿ ಇಂದು ಏನೇನು ಇರುತ್ತದೆ ಎನೇನು ಇರುವುದಿಲ್ಲ ಇಲ್ಲಿದೆ ವಿವರ.

ಶಾಶ್ವತ ನೀರಾವರಿ ಯೋಜನೆ , ರೈತರ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಾಟಳ್ ನಾಗರಾಜ್ ಇಂದು ಕರ್ನಾಟಕ ಬಂದ್‌'ಗೆ ಕರೆ ನೀಡಿದ್ದಾರೆ. ಆದರೆ  ರಾಜ್ಯ ಮಾಲೀಕರ ಸಂಘ ಸೇರಿದಂತೆ ಕೆಲ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ್ರೆ, ಕೆಎಸ್​ಆರ್​ಟಿಸಿ, ಬಿಎಂಟಿಸಿ, ಆಟೋ ಚಾಲಕರ ಸಂಘ ಬೆಂಬಲಿಸಲು ನಿರಾಕರಿಸಿವೆ.  ಇದ್ರಿಂದ ಸಿಡಿದೆದ್ದಿರುವ ವಾಟಾಳ್ ನಾಗರಾಜ್, ಇಂದು ಬಸ್‌'ಗಳು ರೋಡಿಗಿಳಿದರೆ ಕಲ್ಲು ತೂರಲಾಗುವುದು ಅಂತಾ ಎಚ್ಚರಿಕೆ ನೀಡಿದ್ದಾರೆ.

ಇಂದು ಏನೆಲ್ಲಾ ಇರುತ್ತೆ?

-ಮೆಡಿಕಲ್ ಶಾಪ್, ಆಸ್ಪತ್ರೆಗಳು

-ಹಾಲು, ನ್ಯೂಸ್ ಪೇಪರ್

-ಹೋಟೆಲ್​ಗಳು ಓಪನ್

ಇಂದು ಏನೆಲ್ಲಾ ಇರಲ್ಲ ..?

-ಮಾಲ್‌ಗಳು

-ಚಿತ್ರಮಂದಿರಗಳು

-ದಿನಸಿ ಅಂಗಡಿಗಳು

-ತರಕಾರಿ ಮಾರುಕಟ್ಟೆ

-ಈ ಸೇವೆಗಳು ಬಂದ್ ಆಗಬಹುದು?

-ಬಿಎಂಟಿಸಿ , ಕೆಎಸ್‌ಆರ್‌ಟಿಸಿ ಸಂಚಾರ

-ಮೆಟ್ರೋ, ಆಟೋ ಸಂಚಾರ

-ಟ್ಯಾಕ್ಸಿ ಸೇವೆ

ಬಂದ್ ಹಿನ್ನೆಲೆಯಲ್ಲಿ ಇಂದು ನಡೆಯಬೇಕಾಗಿದ್ದ  ಬೆಂಗಳೂರು ವಿವಿಯ ಸ್ನಾತಕೊತ್ತರ ಪದವಿಯ  ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಇನ್ನೊಂದೆಡೆ ಶಾಶ್ವತ ನೀರಾವರಿ ಹೋರಾಟ ತೀವ್ರಗೊಂಡಿರುವ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಮಿಕ್ಕ ಜಿಲ್ಲೆಗಳಲ್ಲಿ ಪರಿಸ್ಥಿತಿ ಆಧರಿಸಿ ಶಾಲೆಗೆ ರಜೆ ಕೊಡಬೇಕೋ ಬೇಡವೋ ಅನ್ನೋದನ್ನು ಆಯಾ ಜಿಲ್ಲಾಧಿಕಾರಿಗಳು ನಿರ್ಧರಿಸಲಿದ್ದಾರೆ.

ಇನ್ನೂ ಕೆಲ ಜಿಲ್ಲೆಗಳಲ್ಲಿ ಇಂದು ಯಥಾಸ್ಥಿತಿ ಇರಲಿದೆ. ಯಾವುದೇ ಸಂಘಟನೆಗಳು ಬೆಂಬಲ ನೀಡದ ಹಿನ್ನೆಲೆಯಲ್ಲಿ ಕೊಪ್ಪಳ , ಚಿತ್ರದುರ್ಗ, ಮಡಿಕೇರಿಯಲ್ಲಿ  ಶಾಲಾ-ಕಾಲೇಜುಗಳು, ಬಸ್ ಸಂಚಾರ ಎಂದಿನಂತೆ ಇರಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ 30 ಕ್ಕೂ ಹೆಚ್ಚು ಕೆಎಸ್​ಆರ್​ಪಿ ತುಕಡಿ ಮತ್ತು 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಒಟ್ನಲ್ಲಿ ಇಂದು ನಡೆಯುವ ಬಂದ್ ಬಗ್ಗೆ ನಾನಾ ಗೊಂದಲಗಳಿದ್ದು, ಏನಾಗುತ್ತೆ ಅನ್ನೋದೇ ಕುತೂಹಲ..

 

 

click me!