ಮುನ್ನೂರು ಮುಸ್ಲಿಮರೊಂದಿಗೆ ಯೋಗ ಮಾಡಲಿದ್ದಾರೆ ಪ್ರಧಾನಿ ಮೋದಿ

By Suvarna Web DeskFirst Published Jun 11, 2017, 8:22 PM IST
Highlights

ಜೂನ್ 21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಯು ಬೆಳಗ್ಗೆ 7ರಿಂದ8 ಗಂಟೆವರೆಗೂ ನಡೆಯಲಿದ್ದು, ಆ ಬಳಿಕ ಯೋಗದ ಕುರಿತ ಉಪನ್ಯಾಸ, ಸಂಗೀತ ಹಾಗೂ ಸಾಹಿತ್ಯ ಕಾರ್ಯಕ್ರಮಗಳು ಜರುಗಲಿವೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

ಲಖ್ನೋ(ಜೂ.11): ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ರಮ್ಜಾನ್ ಉಪವಾಸ ನಿರತ 300 ಮುಸ್ಲಿಮರೂ ಭಾಗಿಯಾಗಲಿದ್ದಾರೆ.

ಲಖ್ನೋದ ರಮಾಬಾಯಿ ಅಂಬೇಡ್ಕರ್ ಮೈದಾನದಲ್ಲಿ ನಡೆಯಲಿರುವ ಯೋಗ ದಿನಾಚರಣೆಯಲ್ಲಿ ಸುಮಾರು 55,000 ಮಂದಿ ಭಾಗವಹಿಸಲಿದ್ದು, ಅವರಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್‌ನ 300 ಮಂದಿ ಮುಸ್ಲಿಮ್ ಪುರುಷ ಮತ್ತು ಮಹಿಳಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು 1,000ಕ್ಕೂ ಅಕ ಮುಸ್ಲಿಮರು ಸಂಪರ್ಕಿಸಿದ್ದರು. ಆದರೆ 300 ಮಂದಿ ಭಾಗವಹಿಸುವುದಾಗಿ ದೃಢಪಡಿಸಿದ್ದಾರೆ.

ಯೋಗದ ದಿನ ಬಹುತೇಕ ಅವರು ರಮ್ಜಾನ್ ಉಪವಾಸ ನಿರತರಾಗಿರುತ್ತಾರೆ ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್‌ನ ರಾಷ್ಟ್ರೀಯ ಸಹ ಸಂಚಾಲಕ ಮಹಿರಾಜ್ ಧ್ವಜ್ ಸಿಂಗ್ ಹೇಳಿದ್ದಾರೆ.

ಜೂನ್ 21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಯು ಬೆಳಗ್ಗೆ 7ರಿಂದ8 ಗಂಟೆವರೆಗೂ ನಡೆಯಲಿದ್ದು, ಆ ಬಳಿಕ ಯೋಗದ ಕುರಿತ ಉಪನ್ಯಾಸ, ಸಂಗೀತ ಹಾಗೂ ಸಾಹಿತ್ಯ ಕಾರ್ಯಕ್ರಮಗಳು ಜರುಗಲಿವೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

click me!