
ಹುಬ್ಬಳ್ಳಿ[ಸೆ.08]: ಜಾರಿ ನಿರ್ದೇಶನಾಲಯದಿಂದ ಡಿಕೆಶಿ ಬಂಧನ, ವಿನಯ ಕುಲಕರ್ಣಿ, ಕೆ.ಜೆ.ಜಾರ್ಜ್ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿರುವ ರಾಜ್ಯ ಸರ್ಕಾರದ ಕ್ರಮ ರಾಜಕೀಯ ದ್ವೇಷ ಎಂಬ ಪ್ರತಿಪಕ್ಷದ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದು, ಸಿಬಿಐ ಬಿಜೆಪಿ ನಿರ್ಮಾಣ ಮಾಡಿರುವ ಸಂಸ್ಥೆಯಲ್ಲ, ಐಟಿ, ಇಡಿ ಸಂಸ್ಥೆಗಳು ಬಿಜೆಪಿ ಸರ್ಕಾರ ಬಂದ ಬಳಿಕ ರಚನೆಯಾಗಿಲ್ಲ ಎಂದು ಹೇಳಿದ್ದಾರೆ.
ಆರೋಪ ಬಂದ ತಕ್ಷಣ ಅಧಿಕಾರದಲ್ಲಿರುವ ಪಕ್ಷಗಳ ಮೇಲೆ ದೂರುವುದು ಸರಿಯಲ್ಲ. ಹಿಂದಿನ ಕಾಲಘಟ್ಟದಲ್ಲಿ ದ್ವೇಷದ ರಾಜಕಾರಣ ಆಗಿರಬಹುದು, ಅದನ್ನೇ ಕಾಂಗ್ರೆಸ್ಸಿನವರೀಗ ಹೇಳುತ್ತಿದ್ದಾರೆ ಎಂದು ಶನಿವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಕಾನೂನು ಅದರದ್ದೇ ಆದ ಕಾರ್ಯ ಮಾಡುತ್ತಿದೆ. ತನಿಖಾ ಸಂಸ್ಥೆಗಳು ಮೊದಲಿನಿಂದಲೂ ಇವೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮೇಲೂ ಆರೋಪಗಳು ಬಂದಿದ್ದವು. ಅವರು ಕಾನೂನು ಹೋರಾಟ ಮಾಡಿ ಹೊರಬಂದಿದ್ದಾರೆ. ನ್ಯಾಯಾಲಯ, ಕಾನೂನು ಪ್ರಕಾರ ಹೋರಾಟ ಮಾಡಬೇಕಾಗುತ್ತದೆ. ಅದು ಬಿಟ್ಟು ರಸ್ತೆ ಹೋರಾಟ ಮಾಡುವುದು ಎಷ್ಟುಸರಿ? ಇವರ ಕಾಲದಲ್ಲಿ ದ್ವೇಷÜದ ರಾಜಕಾರಣ ನಡೆದಿರಬಹುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.