ಜಿಂದಾಲ್ ಗೆ ಭೂಮಿ, HDKಗೆ ಹೊಸ ಸಲಹೆ ಕೊಟ್ಟ BSY

Published : Jun 05, 2019, 04:53 PM IST
ಜಿಂದಾಲ್ ಗೆ ಭೂಮಿ, HDKಗೆ ಹೊಸ ಸಲಹೆ ಕೊಟ್ಟ BSY

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದ್ದಾರೆ. ರಾಜ್ಯದ ಜನತೆ ನೀಡಿರುವ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತೇವೆ ಎನ್ನುವುದರ ಮೇಲೆ ನಮ್ಮೆಲ್ಲರ ಭವಿಷ್ಯ ನಿಂತಿದೆ ಎಂದಿದ್ದಾರೆ.

ಬೆಂಗಳೂರು[ಜೂ. 05]  ರಾಜ್ಯದ ಜನತೆ ನಮಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ನಾವು ಹೇಗೆ ಆ ಜವಾಬ್ದಾರಿ ನಿರ್ವಹಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಭವಿಷ್ಯ ನಿಂತಿದೆ. 25 ಸಂಸದರು ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೂತನ ಸಂಸದರಿಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ಸರ್ಕಾರ ಇದ್ದು ಸತ್ತಂತೆ ಆಗಿದೆ. ವಿಧಾನಸೌಧ ಖಾಲಿ ಆಗಿದೆ. ಗ್ರಾಮ ವಾಸ್ತವ್ಯ ಮಾಡ್ತೇನೆ ಅಂತ ಕುಮಾರಸ್ವಾಮಿ ಹೊಸ ನಾಟಕ ಶುರುಮಾಡಿದ್ದಾರೆ. ಈ ಹಿಂದೆ ಗ್ರಾಮ ವಾಸ್ತವ್ಯ ಮಾಡಿದ್ದ ಗ್ರಾಮ ಹೇಗಿದೆಯೋ ಗೊತ್ತಿಲ್ಲ. ಈಗ ಶಾಲಾ ವಾಸ್ತವ್ಯ ಮಾಡಲು ಹೊರಟಿದ್ದಾರೆ. ಭೀಕರ ಬರಗಾಲ ಇದೆ, ಸಚಿವರು ಆ ಕ್ಷೇತ್ರಗಳಿಗೆ ಹೋಗ್ತಾ ಇಲ್ಲ ಎಂದು ಸರಕಾರ ಮತ್ತು ಕುಮಾರಸ್ವಾಮಿ ಮೇಲೆ ವಾಗ್ದಾಳಿ ಮಾಡಿದರು. 

ಬಿಜೆಪಿ ಅಭ್ಯರ್ಥಿಗಳು ಗೆದ್ದು ಬಂದ ಕಾರಣ ಹೇಳಿದ ಈಶ್ವರಪ್ಪ

ಜಿಂದಾಲ್ ಗೆ ಭೂಮಿ ನೀಡುವುದನ್ನು ಖಂಡಿಸುತ್ತೇನೆ. ಈ ಬಗ್ಗೆ ಹೋರಾಟ ಮಾಡುತ್ತೇವೆ. ಜಿಂದಾಲ್ ಗೆ ಲೀಸ್ ಗೆ ಬೇಕಾದರೆ ನೀಡಲಿ ಅದನ್ನು ಬಿಟ್ಟು ಮಾರಾಟ ಮಾಡಲು ಬಿಡಲ್ಲ ಎಂದು ಬಿಎಸ್ ವೈ ಗುಡುಗಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಟೇಜ್ ಮೇಲೇನೇ ಸಿಟ್ಟಿಗೆದ್ದ ರಚಿತಾ ರಾಮ್ 'ಫ*..' ಅಂದೇಬಿಟ್ರು!.. ಅಂಥಾ ಸಿಟ್ಟು 'ಲೇಡಿ ಬಾಸ್‌'ಗೆ ಯಾಕ್ ಬಂತು?
ಗೋಲ್ಡನ್ ಟೆಂಪಲ್ ಕೊಳದಲ್ಲಿ ಮುಖ ತೊಳೆದು ಉಗುಳಿದ ಅನ್ಯಕೋಮಿನ ವ್ಯಕ್ತಿ, ಭುಗಿಲೆದ್ದ ಆಕ್ರೋಶ