ಗಂಗಾಜಲ ಹೊತ್ತು ಎವರೆಸ್ಟ್ ಏರಿದ ಐಎಎಸ್ ಅಧಿಕಾರಿ!

By Web Desk  |  First Published Jun 5, 2019, 3:19 PM IST

ಮೌಂಟ್ ಎವರೆಸ್ಟ್ ಏರಿದ ದೇಶದ ಮೊದಲ ಐಎಎಸ್ ಅಧಿಕಾರಿ| ಉತ್ತರ ಪ್ರದೇಶ ಕೆಡರ್ ಐಎಎಸ್ ಅಧಿಕಾರಿ ರವೀಂದ್ರ ಕುಮಾರ್| ಗಂಗಾ ನದಿ ಶುದ್ಧೀಕರಣಕ್ಕಾಗಿ ಜಾಗೃತಿ ಮೂಡಿಸಲು ಎವರೆಸ್ಟ್ ಏರಿದ ರವೀಂದ್ರ| ಗಂಗಾಜಲ ಹೊತ್ತು ಮೌಂಟ್ ಎವರೆಸ್ಟ್ ಏರಿದ ಐಎಎಸ್ ಅಧಿಕಾರಿ| ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ| ‘ಸ್ವಚ್ಛ ಗಂಗಾ, ಸ್ವಚ್ಛ ಭಾರತ ಎವರೆಸ್ಟ್ ಅಭಿಯಾನ 2019’


ಲಕ್ನೋ(ಜೂ.05): ಗಂಗಾ ನದಿ ಶುದ್ಧೀಕರಣಕ್ಕಾಗಿ ಜಾಗೃತಿ ಮೂಡಿಸಲು ಐಎಎಸ್ ಅಧಿಕಾರಿಯೋರ್ವರು, ಗಂಗಾಜಲ ಹೊತ್ತು ಮೌಂಟ್ ಎವರೆಸ್ಟ್ ಪರ್ವತ ಯಶಸ್ವಿಯಾಗಿ ಏರಿದ್ದಾರೆ.

ಉತ್ತರ ಪ್ರದೇಶ ಕೆಡರ್ ಐಎಎಸ್ ಅಧಿಕಾರಿ ರವೀಂದ್ರ ಕುಮಾರ್ ಯಶಸ್ವಿಯಾಗಿ ಎವರೆಸ್ಟ್ ಶಿಖರದ ತುದಿ ತಲುಪಿದ್ದು, ಈ ಮೂಲಕ ಎವರೆಸ್ಟ್ ಏರಿದ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

IAS officer summits Everest with gangajal to spread awareness on 'Swachh Ganga'

Read story | https://t.co/umDwW2xd2R pic.twitter.com/zanShacieW

— ANI Digital (@ani_digital)

Tap to resize

Latest Videos

ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ರವೀಂದ್ರ ಕುಮಾರ್, ಗಂಗಾ ನದಿ ಶುದ್ಧೀಕರಣಕ್ಕಾಗಿ ಜನಜಾಗೃತಿ ಮೂಡಿಸುವಲ್ಲಿ ನಿರತರಾಗಿದ್ದಾರೆ.

‘ಸ್ವಚ್ಛ ಗಂಗಾ, ಸ್ವಚ್ಛ ಭಾರತ ಎವರೆಸ್ಟ್ ಅಭಿಯಾನ 2019’ ಎಂಬ ಹೆಸರಿನಲ್ಲಿ ರವೀಂದ್ರ ಕುಮಾರ್ ಯಶಸ್ವಿಯಾಗಿ ಎವರೆಸ್ಟ್ ಗಿರಿ ಶಿಖರ ಏರಿದ್ದು, ರವೀಂದ್ರ ಕುಮಾರ್ ಅವರ ಅಭಿಯಾನಕ್ಕೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

click me!