ರೆಸಾರ್ಟ್ ವಿಶ್ರಾಂತಿ ಅಂತ್ಯಗೊಳಿಸಿದ ಕುಮಾರಸ್ವಾಮಿಗೆ ರೆಡ್ ಕಾರ್ಪೆಟ್

Published : May 12, 2019, 03:30 PM IST
ರೆಸಾರ್ಟ್ ವಿಶ್ರಾಂತಿ ಅಂತ್ಯಗೊಳಿಸಿದ ಕುಮಾರಸ್ವಾಮಿಗೆ ರೆಡ್ ಕಾರ್ಪೆಟ್

ಸಾರಾಂಶ

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದ ಬಳಿಕ ರೆಸಾರ್ಟ್ ಮೊರೆ ಹೋಗಿದ್ದ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ರಾಂತಿ ಮುಗಿಸಿ ಬೆಂಗಳೂರಿನತ್ತ ಮುಖಮಾಡಿದ್ದಾರೆ. ಇದಕ್ಕೆ ರಾಜ್ಯ ಬಿಜೆಪಿ ಸ್ವಾಗತ ಕೋರಿದೆ.

ಬೆಂಗಳೂರು,(ಮೇ.12): ಕುಮಾರಸ್ವಾಮಿ ಅವರಿಗೆ ಬೆಂಗಳೂರಿಗೆ ಸ್ವಾಗತ' ಎಂದು ಕರ್ನಾಟಕ ಬಿಜೆಪಿ ಟ್ವೀಟ್‌ ಮೂಲಕ ಸ್ವಾಗತ ಕೋರಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ರೆಸಾರ್ಟ್ ವಾಸ್ತವ್ಯ ಭಾನುವಾರ ಅಂತ್ಯಗೊಂಡಿದೆ. ಇದನ್ನು ಲೇವಡಿ ಮಾಡಿದ್ದ ಕರ್ನಾಟಕ ಬಿಜೆಪಿ ಟ್ವೀಟ್‌ ಮಾಡಿ ಮುಖ್ಯಮಂತ್ರಿಗಳಿಗೆ ಬೆಂಗಳೂರಿಗೆ ಸ್ವಾಗತ ಎಂದು ವ್ಯಂಗ್ಯವಾಡಿದೆ.

ಮತ್ತೆ ರೆಸಾರ್ಟ್​ನತ್ತ ಮುಖ ಮಾಡಿದ ಕುಮಾರಸ್ವಾಮಿ, ದೇವೇಗೌಡ್ರು..!

ಮುಖ್ಯಮಂತ್ರಿಗಳ ರೆಸಾರ್ಟ್ ವಾಸ್ತವ್ಯ ಅಂತ್ಯವಾಗಿದ್ದು, ಮುಂದೇನು? ಎಂದು ಪ್ರಶ್ನೆ ಮಾಡಿದೆ. ಅಲ್ಲದೆ ಇನ್ನೇನಾದರೂ ಬೇರೆ ರೆಸಾರ್ಟ್ ಗೆ ತೆರಳುವವರಿದ್ದೀರಾ? ವಿದೇಶ ಪ್ರವಾಸದ ಯೋಜನೆ ಏನಾದರೂ ಇದೆಯೆ? ಕಣ್ಣೀರು ಹಾಕುವ ಕಾರ್ಯಕ್ರಮ? ಬಿಜೆಪಿಯನ್ನು ದೂರುವ ಕಾರ್ಯಕ್ರಮಗಳಿದೆಯೆ? ಎಂದೂ ಪ್ರಶ್ನೆಸಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಡಿಕೇರಿಯ ಇಬ್ಬನಿ ರೆಸಾರ್ಟ್‌ನಲ್ಲಿ ಶುಕ್ರವಾರ ರಾತ್ರಿಯಿಂದ ವಾಸ್ತವ್ಯ ಹೂಡಿದ್ದರು. ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸಚಿವ ಸಾ.ರಾ.ಮಹೇಶ್ ಅವರು ಸಹ ಜೊತೆಗಿದ್ದರು. ಇಂದು (ಭಾನುವಾರ) ಸಂಜೆ ಅವರು ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಸನ: ತಹಸಿಲ್ದಾರ್ ಕಿರುಕುಳ ಆರೋಪ; ಕಚೇರಿ ಆವರಣದಲ್ಲೇ ಉಪತಹಸಿಲ್ದಾರ್ ಆತ್ಮ೧ಹತ್ಯೆ ಯತ್ನ!
ಫ್ಲಾಶ್ ಹಾಕಿ ಜೀವ ಉಳಿಸಲು ಅಂಗಲಾಚಿದ ಟೆಕ್ಕಿ ಕೊನೆಯ ವಿಡಿಯೋ, ಅಸಹಾಯಕರಾಗಿ ಕುಳಿತ ತಂದೆ