ಯತ್ನಾಳ್ ಬ್ಯಾಟ್ ಬಳಸಿ ಪೋರು-ಸಿಕ್ಸ್ ಬಾರಿಸಿದ ಸಿದ್ದರಾಮಯ್ಯ/ ಯಡಿಯೂರಪ್ಪ ವೀಕ್ ಸಿಎಂ ತಮ್ಮ ಹಳೆ ಹೇಳಿಕೆಗೆ ಹೊಸ ಅರ್ಥ ಕೊಟ್ಟ ವಿಪಕ್ಷ ನಾಯಕ/ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರದ್ದೇ ಮಾತು
ಬೆಂಗಳೂರು(ಅ. 10) ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬರ ಪರಿಹಾರದ ಬಗ್ಗೆ ಮಾತನಾಡುತ್ತ ತಮ್ಮ ಪಕ್ಷದ ನಾಯಕರ ವಿರುದ್ಧವೇ ಹರಿಹಾಯ್ದಿದ್ದರು. ಇದಕ್ಕೆ ಪರಿಣಾಮ ಎಂಬಂತೆ ಶೋಕಾಸ್ ನೋಟಿಸ್ ಸಹ ಪಡೆದುಕೊಂಡಿದ್ದರು.
ಇದೇ ವಿಚಾರ ಗುರುವಾರ ಆರಂಭವಾದ ವಿಧಾನಸಭೆ ಕಲಾಪದಲ್ಲಿಯೂ ಪ್ರತಿಧ್ವನಿಸಿತು. 'ಯತ್ನಾಳ್ ಸತ್ಯ ಹೇಳ್ತಾರೆ. ಅವರು ನನಗೆ ಒಳ್ಳೆ ಸ್ನೇಹಿತ. ಯಡಿಯೂರಪ್ಪ ಅವರನ್ನ ತೆಗೆಯೋದಕ್ಕೆ ಇಬ್ಬರು ಕೇಂದ್ರ ಸಚಿವರು ಹೊರಟಿದ್ದಾರೆ ಅಂತಾ ಹೇಳಿದ್ದಾರೆ ಯತ್ನಾಳ್. ಪಾಪ ಯತ್ನಾಳ್ ಸತ್ಯ ಹೇಳಿದ್ದಾರೆ, ಅವರ ಸತ್ಯ ಬೇರೆಯವರಿಗೆ ಕಹಿ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಯತ್ನಾಳ್ ಮಾತುಗಳನ್ನೆ ಇಟ್ಟುಕೊಂಡು ಕಾಲೆಳೆದರು.
undefined
ಚಾಡಿಕೋರ ಕೇಂದ್ರ ಸಚಿವರಿಂದ ಬಿಎಸ್ ವೈ ಮುಗಿಸಲು ಯತ್ನ!
ಡೋಂಟ್ ವರಿ ಮಿಸ್ಟರ್ ಯತ್ನಾಳ್. ಯಡಿಯೂರಪ್ಪ ಅವರಿಗೆ ಯಾರು ಡಿಸಿಎಂ ಅನ್ನೋದೇ ಗೊತ್ತಿಲ್ಲ ಪಾಪ.. ಒಬ್ಬರು ಸೋತವರು ಡಿಸಿಎಂ, ಒಬ್ಬರು ಮೊದಲ ಬಾರಿಗೆ ಸಚಿವರಾದವರು ಡಿಸಿಎಂ, ಕಾರಜೋಳ ಡಿಸಿಎಂ ನಾನು ಒಪ್ತೀನಿ.. ಯಡಿಯೂರಪ್ಪ ಹೇಳಿದವರು ಒಂದಿಬ್ಬರು ಸಚಿವರಾಗಿದ್ದಾರೆ ಅಷ್ಟೇ.. ಉಳಿದವರು ಹೈಕಮಾಂಡ್ ಹೇಳಿದವರು ಸಚಿವರು ಎನ್ನುತ್ತ ಯಡಿಯೂರಪ್ಪ ವೀಕ್ ಸಿಎಂ ಎಂಬ ತಮ್ಮ ಮೊದಲಿನ ಹೇಳಿಕೆಯನ್ನು ಬೇರೆಯ ತೆರನಾಗಿ ವಿಧಾನಸೌಧದಲ್ಲಿಯೂ ಹೊರಗಿಟ್ಟರು.
ಚಳಿಗಾಲದ ಅಧಿವೇಶನ ಆರಂಭಕ್ಕೆ ಕೊನೆ ದಿನ ಕಾಂಗ್ರೆಸ್ ವಿಪಕ್ಷ ನಾಯಕರನ್ನಾಗಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿತ್ತು. ವಿಪಕ್ಷ ನಾಯಕರ ರೇಸ್ ನಲ್ಲಿ ಇದ್ದ ಪರಮೇಶ್ವರ ಮತ್ತು ಎಚ್‌ಕೆ ಪಾಟೀಲರನ್ನು ಹಿಂದಿಕ್ಕಿ ಸಿದ್ದರಾಮಯ್ಯ ಆಯ್ಕೆಯಾಗಿದ್ದರು.