
ಕಾಂಗ್ರೆಸ್ ಆಡಳಿತ ಇರುವ ಭಟ್ಕಳ ಪುರಸಭೆಯ ಕಟ್ಟಡದಲ್ಲಿ ಈಗ ದೆವ್ವದ ಕಾಟ ಶುರುವಾಗಿದೆ. ದೆವ್ವಕ್ಕಾಗಿ ಈಗ ಕಟ್ಟಡದೊಳಗೆ ಸದ್ದಿಲ್ಲದೇ ಹೋಮ ಹವನ ನಡೆದಿದೆ. ಪುರಸಭೆಯ ಅಂಗಡಿಕಾರರು, ಪುರಸಭೆಗೆ ಕೆಲಸ ಮಾಡುವ ಗುತ್ತಿಗೆದಾರರ ವ್ಯವಹಾರದಲ್ಲಿ ನಷ್ಟ ಸಂಭವಿಸಿದ್ದ ಕಾರಣ ಪುರಸಭೆ ಕೆಳಂತಸ್ತಿನನಲ್ಲಿ ಹೋಮ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಸಪ್ಟೆಂಬರ್ 14 ರಂದು ಭಟ್ಕಳ ಪುರಸಭೆಯ ತೆರವು ಕಾರ್ಯಚರಣೆ ವೇಳೆ ಓರ್ವ ಪುರಸಭೆಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ರಾಮಚಂದ್ರ ನಾಯ್ಕ, ಅಂಗಡಿ ಕೈತಪ್ಪಿ ಹೋಗಲಿದೆ ಎಂಬ ಭಯದಲ್ಲಿ ಪುರಸಭೆ ಒಳಗೆ ಆಡಳಿತ ಕಛೇರಿ ಎದುರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈಗ ಪುರಸಭೆಯ ಕಟ್ಟಡದಲ್ಲಿ ರಾಮಚಂದ್ರ ನಾಯ್ಕ ದೆವ್ವವಾಗಿ ಕಾಟ ಕೊಡಲು ಆರಂಭಿಸಿದ್ದಾನೆ ಅಂತ ಮಾತಾಡಿಕೊಳ್ತಿದ್ದಾರೆ. ದೆವ್ವದ ಕಾಟಕ್ಕಾಗಿ ಪುರಸಭೆಯ ನೆಲಮಾಳಿಗೆಯಲ್ಲಿ ಹೋಮ ಹವನ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.