ಉಚಿತ ಕಾಂಡೋಂಗೆ ಮುಗಿಬಿದ್ದ ಜನ

Published : Nov 13, 2017, 11:55 AM ISTUpdated : Apr 11, 2018, 12:49 PM IST
ಉಚಿತ ಕಾಂಡೋಂಗೆ ಮುಗಿಬಿದ್ದ ಜನ

ಸಾರಾಂಶ

69 ದಿನದಲ್ಲಿ 10 ಲಕ್ಷ ಕಾಂಡೋಂ ತರಿಸಿಕೊಂಡ ಭಾರತೀಯರು | ಆನ್‌ಲೈನ್ ಮೂಲಕ ರವಾನೆ ಜನಪ್ರಿಯ

ಬೆಂಗಳೂರು: ಅಂಗಡಿಗೆ ಹೋಗಿ ಕಾಂಡೋಂ ಖರೀದಿಸಲು ಸಂಕೋಚ ಪಟ್ಟುಕೊಳ್ಳುವ ದೇಶದ ಜನರು ಆನ್‌ಲೈನ್ ಮೂಲಕ ಉಚಿತವಾಗಿ ಸಿಗುವ ಕಾಂಡೋಂ ಖರೀದಿಗೆ ಮುಗಿಬಿದ್ದಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ಇ-ಮೇಲ್ ಅಥವಾ ಫೋನ್ ಮೂಲಕ ಆರ್ಡರ್ ಮಾಡಿದವರ ಮನೆ ಬಾಗಿಲಿಗೇ ಉಚಿತವಾಗಿ ಕಾಂಡೋಂ ತಲುಪಿಸುವ ‘ಫ್ರೀ ಕಾಂಡೋಂ ಸ್ಟೋರ್’ ಸೇವೆ ದೇಶದಲ್ಲಿ ಆರಂಭವಾದ ಕೇವಲ 69 ದಿನಗಳಲ್ಲಿ ಬರೋಬ್ಬರಿ 10 ಲಕ್ಷ ಕಾಂಡೋಂಗಳು ಖಾಲಿಯಾಗಿವೆ!

ಏಡ್ಸ್ ಹೆಲ್ತ್‌ಕೇರ್ -ಫೌಂಡೇಷನ್ ಏ.28ರಂದು ಫ್ರೀ ಕಾಂಡೋಂ ಸ್ಟೋರ್ ಆರಂಭಿಸಿತ್ತು. ಹಿಂದುಸ್ತಾನ್ ಲೇಟೆಕ್ಸ್ ಕಂಪನಿಯಿಂದ 10 ಲಕ್ಷ ಕಾಂಡೋಂಗಳ ಸರಕು ತರಿಸಿಕೊಂಡಿತ್ತು. ಭಾರತದಲ್ಲಿ ಜನರು ಕಾಂಡೋಂ ಖರೀದಿಸಲು ಹಿಂದೇಟು ಹಾಕುವ ಕಾರಣಕ್ಕೆ ವರ್ಷಾಂತ್ಯದವರೆಗೂ ಈ ಸರಕು ಸಾಕಾಗಬಹುದು ಎಂದು ಫೌಂಡೇಷನ್ ಅಂದಾಜಿಸಿತ್ತು. ಆದರೆ ಕೇವಲ 69 ದಿನಗಳಲ್ಲಿ 9.56 ಲಕ್ಷ ಕಾಂಡೋಂಗಳು ಬಿಕರಿಯಾಗಿವೆ.

ಈ ಪೈಕಿ 5.14ಲಕ್ಷ ಕಾಂಡೋಂಗಳನ್ನು ಸಮುದಾಯ ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಖರೀದಿಸಿದ್ದರೆ, ಉಳಿದ 4.41 ಲಕ್ಷ ಕಾಂಡೋಂಗಳನ್ನು ಜನರು ತಮ್ಮ ಮನೆಗೆ ತರಿಸಿಕೊಂಡಿದ್ದಾರೆ.

ಈ ಪೈಕಿ ಅತಿ ಹೆಚ್ಚು ಬೇಡಿಕೆ ದೆಹಲಿಯಿಂದ ವ್ಯಕ್ತವಾಗಿದ್ದರೆ, ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ. ಅಂಗಡಿಗೆ ಹೋಗಿ ಕಾಂಡೋಂ ಕೇಳಲು ಭಾರತೀಯರು ಮುಜುಗರ ಅನುಭವಿಸುತ್ತಾರೆ. ಆದರೆ ಆನ್‌ಲೈನ್ ಮೂಲಕ ಆರ್ಡರ್ ಮಾಡಿದರೆ, ಯಾರಿಗೂ ಗೊತ್ತಾಗುವುದಿಲ್ಲ. ಈ ಕಾರಣಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ.

ಖರೀದಿಯಲ್ಲಿ ಕರ್ನಾಟಕ ನಂ.2

ಕುಟುಂಬ ಕಲ್ಯಾಣಕ್ಕೆ ಅತ್ಯಂತ ಅಗ್ಗದ ವಿಧಾನ ಕಾಂಡೋಂ. ಲೈಂಗಿಕವಾಗಿ ಹರಡುವ ರೋಗಗಳಿಂದಲೂ ಜನರನ್ನು ಇದು ರಕ್ಷಿಸುತ್ತದೆ. ಆದರೆ ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆಯ ಪ್ರಕಾರ ಕೇವಲ ಶೇ.5.6 ಮಂದಿಯಷ್ಟೇ ದೇಶದಲ್ಲಿ ಕಾಂಡೋಂ ಬಳಸುತ್ತಾರೆ. ಪ್ರಗತಿಪರ ರಾಜ್ಯವಾದ ಕರ್ನಾಟಕದಲ್ಲಿ ಈ ಪ್ರಮಾಣ ಕೇವಲ ಶೇ.1.7ರಷ್ಟಿದೆ. ಬೆಂಗಳೂರಿನಲ್ಲಿ ಶೇ.3.6ರಷ್ಟು ಮಂದಿ ಕಾಂಡೋಂ ಬಳಕೆ ಮಾಡುತ್ತಾರೆ. ಆದರೆ ಕೋಲ್ಕತಾ (ಶೇ.19) ಹಾಗೂ ದೆಹಲಿ (ಶೇ.10) ಗೆ ಹೋಲಿಸಿದರೆ ಬೆಂಗಳೂರು ಹಿಂದಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವದ ಅತೀ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆ ಕೆತ್ತಿದ ಶಿಲ್ಪಿ ರಾಮ್ ಸುತರ್ ಇನ್ನಿಲ್ಲ
ಗ್ಯಾರಂಟಿ ಹೆಸರಲ್ಲಿ ಲೂಟಿ, ಇದು ನುಂಗಣ್ಣಗಳ, ಲೂಟಿಕೋರರ ಸರ್ಕಾರ:ಆರ್ ಅಶೋಕ್ ತೀವ್ರ ವಾಗ್ದಾಳಿ