
ಕಣ್ಣೂರು(ಸೆ.17): ಪ್ರೀತಿಗೆ ಸಾವಿಲ್ಲ ಅಂತಾರಲ್ಲ ಅದೆಷ್ಟು ನಿಜ ನೋಡಿ. ಎರಡು ಹೃದಯಗಳು ಒಂದಾದ ಮೇಲೆ ಸಾವಿಗೆ ಅಲ್ಲಿ ಸ್ಥಾನವೇ ಇಲ್ಲ. ಸಾವು ಬಂದರೂ ಅದು ದೇಹಕ್ಕೆ ಹೊರತು ಪ್ರೀತಿಗಲ್ಲ.
ಅದರಂತೆ ಕೇರಳದ ಕಣ್ಣೂರಿನಲ್ಲಿ ಪತ್ನಿಯೋರ್ವಳು ತನ್ನ ಮೃತ ಪತಿಯ ವೀರ್ಯದಿಂದ ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿ, ತನ್ನ ಪತಿಯನ್ನು ಮತ್ತೆ ಜೀವಂತವಾಗಿರಿಸಿದ್ದಾಳೆ. ಹೌದು, ಕಣ್ಣೂರಿನ ಶಿಲ್ನಾ ಎಂಬ ಬ್ಯಾಂಕ್ ಉದ್ಯೋಗಿ ತಮ್ಮ ಮೃತ ಪತಿಯ ವೀರ್ಯದ ಸಹಾಯದಿಂದ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ.
ಶಿಲ್ನಾ ಪತಿ ಕೆ.ವಿ. ಸುಧಾಕರನ್ ಮಲಯಾಳಂ ಸಾಹಿತ್ಯ ಲೋಕದಲ್ಲಿ ಖ್ಯಾತಿ ಗಳಿಸಿದವರು. ಪ್ರಸಿದ್ಧ ಪತ್ರಕರ್ತರಾಗಿದ್ದ ಸುಧಾಕರನ್, ಆಗಸ್ಟ್ 15, 2017 ರಂದು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಆದರೆ ಗಂಡನನ್ನು ಕಳೆದುಕೊಳ್ಳಲು ಸಿದ್ಧರಿಲ್ಲದ ಶೀಲ್ನಾ, ತಮ್ಮ ಪತಿಯ ವೀರ್ಯವನ್ನು ಕಣ್ಣೂರಿನ ವೀಯರ್ಯ ಸಂಸ್ಕರಣ ಘಟಕದಲ್ಲಿ ಸಂಸ್ಕರಿಸಿದ್ದರು.
ಇದೀಗ ಶಿಲ್ನಾ ಕಳೆದ ಸೆ.13 ರಂದು, ತಮ್ಮ ಪತಿಯ ನಿಧನದ ಒಂದು ವರ್ಷ 29 ದಿನಗಳ ಬಳಿಕ ಮುದ್ದಾದ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿಲ್ನಾ, ತಮ್ಮ ಪತಿ ಎರಡು ಪುಟ್ಟ ಜೀವಗಳ ಆಂತರ್ಯದಲ್ಲಿ ಉಸಿರಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.