
ಬೆಂಗಳೂರು(ಜೂ.28): ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹೊರರಾಜ್ಯದವರ ದಬ್ಬಾಳಿಕೆ ಹೆಚ್ಚಾಗುತ್ತಿದ್ದು, ಸಂಜಯನಗರದಲ್ಲಿ ಖಾಸಗಿ ಕಂಪನಿಯ ಮಾಲೀಕನೊಬ್ಬ ತನ್ನ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಕರಣ ಮಾಸುವ ಮುನ್ನವೇ ಕನ್ನಡ ಮಾತ ನಾಡುವಂತೆ ಆಗ್ರಹಿಸಿದ ಗ್ರಾಹಕರೊ ಬ್ಬರಿಗೆ ಹಿಂದಿ ಭಾಷಿಕನೊಬ್ಬ ಬೆದರಿಕೆ ಹಾಕಿದ ಪ್ರಕರಣ ನಡೆದಿದೆ.
ಬೆಂಗಳೂರಿನ ಬೆಳ್ಳಂದೂರು ಬಳಿಯ ಸೆಂಟ್ರಲ್ ಶಾಪಿಂಗ್ ಮಾಲ್‌ನ ಮಳಿಗೆ ಯೊಂದರ ಸಿಬ್ಬಂದಿ ಹಿಂದಿ ಭಾಷೆಯಲ್ಲಿ ಮಾತ ನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಬೆದರಿಕೆ ಹಾಕಿದ್ದರು ಎಂದು ಸಾಫ್ಟ್‌ವೇರ್ ಎಂಜಿನಿಯರ್ ಲಕ್ಷ್ಮೇ ಎಂಬುವರು ಸಾಮಾಜಿಕ ಜಾಲತಾಣ ‘ಫೇಸ್‌ಬುಕ್' ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ದೂರುಗಳು ಠಾಣೆಗೆ ಬಂದಿಲ್ಲ ಎಂದು ಬೆಳ್ಳಂದೂರು ಠಾಣೆ ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ‘ಕನ್ನಡಪ್ರಭ'ಕ್ಕೆ ಸ್ಪಷ್ಟಪಡಿಸಿದ್ದಾರೆ.
ಮಾಲ್‌ನ ಸಿಬ್ಬಂದಿ ವರ್ತನೆ ವಿರುದ್ಧ ಮಾಲ್‌ನ ಸಹಾಯವಾಣಿಗೆ ದೂರು ನೀಡಲು ಹೋಗಿದ್ದೆ. ಅವರು ಕೂಡ ಸ್ಪಂದಿಸಲಿಲ್ಲ. ‘ದಿನ ಬಳಕೆ ವಸ್ತುಗಳನ್ನು ಖರೀದಿಸಲು ಮಾಲ್‌ಗೆ ಹೋಗಿದ್ದೆ. ಅಲ್ಲಿಯ ಸಿಬ್ಬಂದಿ ಹಿಂದಿಯಲ್ಲಷ್ಟೇ ಮಾತನಾಡಿ ದ್ದರು. ಆಗ ನಾನು, ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಮಾತನಾಡಿ ಎಂದೆ. ಆಗ ಸಿಬ್ಬಂದಿ ಹಿಂದಿಯಲ್ಲೇ ಮಾತ ನಾಡಿ ಎಂದಿದ್ದರು. ನಾನು ಕನ್ನಡ ದಲ್ಲೇ ಮಾತನಾಡುತ್ತೇನೆ ಎಂದಾಗ ಅಸಭ್ಯವಾಗಿ ವರ್ತಿಸಿ ದರು. ದೂರು ನೀಡಲು ಸಹಾಯವಾಣಿ ಮಳಿಗೆಗೆ ಹೋಗಿದ್ದೆ. ಅಲ್ಲಿನ ಅಧಿಕಾರಿ, ‘ಅವರಿಗೆ ಹಿಂದಿ ಬಿಟ್ಟು ಬೇರೆ ಭಾಷೆ ಬರುವು ದಿಲ್ಲ. ನೀವು ಅದೇ ಭಾಷೆಯಲ್ಲಿ ಮಾತನಾಡಿ, ಏನು ಬೇಕು ಅದನ್ನು ತೆಗೆದು ಕೊಂಡು ಹೋಗಿ' ಎಂದು ಹೇಳಿದ್ದರು.
ಅವರ ಮಾತನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದೆ. ಅದನ್ನು ನೋಡಿದ ಅವರು ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದರು. ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಬಂದೆ ಎಂದು ಎಂದು ಮಹಿಳೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ ದೂರು ಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.