ಹೋಟಲ್'ನಲ್ಲಿ ಊಟ ಆರ್ಡ್'ರ್ ಮಾಡುವ ಮುನ್ನ ಹೊಟ್ಟೆಯ ಸುತ್ತಳತೆ ನೀಡುವುದು ಕಡ್ಡಾಯ

By Suvarna Web DeskFirst Published Apr 16, 2017, 7:30 PM IST
Highlights

ಅದರಂತೆಹೋಟೆಲ್ನಲ್ಲಿಮೆನುಆರ್ಡರ್ಮಾಡುವಮುನ್ನವೇಟರ್ಗಳುಇಂಚುಪಟ್ಟಿಹಿಡಿದುಕೊಂಡುಗ್ರಾಹಕರಹೊಟ್ಟೆಯನ್ನುಅಳತೆಮಾಡಲಿದ್ದಾರೆ. ಹೊಟ್ಟೆದೊಡ್ಡದಾಗಿದ್ದವರಿಗೆಹೆಚ್ಚುಆಹಾರಮತ್ತುಚಿಕ್ಕದಾಗಿದ್ದವರಿಗೆಕಡಿಮೆಆಹಾರನೀಡಲಿದ್ದಾರೆ.

ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ನೀಡಲಾಗುವ ಆಹಾರಕ್ಕೆ ಮಿತಿ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೇ, ಒಬ್ಬ ವ್ಯಕ್ತಿ ಗರಿಷ್ಠ ಎಷ್ಟುಆಹಾರ ಸೇವಿಸಬಲ್ಲ ಎಂಬುದನ್ನು ಹೋಟೆಲ್‌ನವರೇ ತಿಳಿಸಬೇಕು ಹೇಳಿದೆ. ಹೀಗಾಗಿ ಹೋಟೆಲ್‌ ಮಾಲೀಕರು ಇದಕ್ಕೊಂದು ಪರಿಹಾರ ಸೂತ್ರ ಕಂಡುಹಿಡಿದಿದ್ದು, ಊಟ ಆರ್ಡರ್‌ ಮಾಡುವ ಗ್ರಾಹಕರಿಂದ ಹೊಟ್ಟೆಯ ಅಳತೆ ಪಡೆಯುವ ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ ಹೋಟೆಲ್‌ನಲ್ಲಿ ಮೆನು ಆರ್ಡರ್‌ ಮಾಡುವ ಮುನ್ನ ವೇಟರ್‌ಗಳು ಇಂಚುಪಟ್ಟಿಹಿಡಿದುಕೊಂಡು ಗ್ರಾಹಕರ ಹೊಟ್ಟೆಯನ್ನು ಅಳತೆ ಮಾಡಲಿದ್ದಾರೆ. ಹೊಟ್ಟೆದೊಡ್ಡದಾಗಿದ್ದವರಿಗೆ ಹೆಚ್ಚು ಆಹಾರ ಮತ್ತು ಚಿಕ್ಕದಾಗಿದ್ದವರಿಗೆ ಕಡಿಮೆ ಆಹಾರ ನೀಡಲಿದ್ದಾರೆ. ಡೊಳ್ಳು ಹೊಟ್ಟೆಯವರಿಗಾಗಿ ಪ್ರತ್ಯೇಕ ಕೌಂಟರ್‌ ತೆರೆಯಲು ಚಿಂತನೆ ನಡೆದಿದೆ. ಅಲ್ಲದೇ ಊಟ ಅಥವಾ ತಿಂಡಿಯನ್ನು ಪ್ಲೇಟಿನಲ್ಲೇ ಬಿಟ್ಟರೆ ಅದನ್ನು ತಿಂದು ಮುಗಿಸುವ ತನಕವೂ ಕೈತೊಳೆಯುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ.

ಸೂಚನೆ:ಇದು ಕನ್ನಡಪ್ರಭ ವಾರ್ತೆಯ ಸುಳ್'ಸುದ್ದಿ ಅಂಕಣ: ಬಾಯಲ್ಲಿ ನಗೆ ಬರಿಸುವುದಷ್ಟೆ ಈ ಸುದ್ದಿಯ ಉದ್ದೇಶ

click me!