ಕಥಾ ಕಮ್ಮಟಕ್ಕೆ ಮೋದಿಗೆ ಪತ್ರ ಬರೆದಿದ್ದ ಬಾಲಕಿಯ ಮುಗ್ಧ ಆಹ್ವಾನ

By Web DeskFirst Published Oct 17, 2018, 10:42 PM IST
Highlights

ಚಾರ್ಮಾಡಿ ಘಾಟ್ ನ ಸುಂದರ ಪರಿಸರದಲ್ಲಿ ನಡೆಯಲಿರುವ ಕಥಾ ಕಮ್ಮಟಕ್ಕೆ ವಿದ್ಯಾರ್ಥಿನಿಯೊಬ್ಬಳು ಪ್ರೀತಿಯ ಆಹ್ವಾನ ನೀಡಿದ್ದಾರೆ. ಅವಳ ಕರೆಯುವಿಕೆಯನ್ನು ಒಮ್ಮೆ ಕೇಳಿದರೆ ನಾವು ಕಮ್ಮಟಕ್ಕೆ ಹೋಗಿ ಬರೋಣ ಎಂದು ಅನಿಸದೇ ಇರದು.

ಮೂಡಿಗೆರೆ[ಅ.17] ಈಕೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಬಾಲಕಿ. ಹೆಸರು ನಮನ. ಎಲ್ಲರಿಗೂ ನಮಿಸುತ್ತಲೆ  ಮೂಡಿಗೆರೆ ತಾಲೂಕಿನ ಆಲೇಕಾನ್ ಹೊರಟ್ಟಿಯಲ್ಲಿ ನಡೆಯುವ ಕಥಾ ಕಮ್ಮಟಕ್ಕೆ ಆಹ್ವಾನ ನೀಡಿದ್ದಾಳೆ.

ಕನ್ನಡ ಸಾಹಿತ್ಯ ಪರಿಷತ್ತು, ಮೂಡಿಗೆರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಣಕಲ್  ಹೋಬಳಿ ಆಶ್ರಯದಲ್ಲಿ 'ಕಥಾ ಕಮ್ಮಟ-2018'ನ್ನು ಅಕ್ಟೋಬರ್ 21 ಭಾನುವಾರ ಆಯೋಜನೆ  ಮಾಡಲಾಗಿದೆ. ಅದೇ ದಿನ ಬೆಳಗ್ಗೆ 9.30ಕ್ಕೆ ಕಮ್ಮಟವನ್ನು "ನಾನು ಅವನಲ್ಲ ಅವಳು"  ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು  ಉದ್ಘಾಟಿಸಲಿದ್ದಾರೆ.

ಯಾವ ಕಾರಣಕ್ಕೆ ಪತ್ರ ಬರೆದಿದ್ದಳು? ನಮ್ಮ ಊರು ಚಿಕ್ಕಮಗಳೂರು ಜಿಲ್ಲೆಯ ಗಡಿಯಂಚಿನ ಗ್ರಾಮ ಮೂಡಿಗೆರೆ ತಾಲೂಕಿನ ಆಲೇಕಾನ್ ಹೊರಟ್ಟಿಯಲ್ಲಿ ಮೂಲ ಸೌಕರ್ಯ ಯಾವುದು ಇಲ್ಲ. ಇದನ್ನು ಕೂಡಲೆ ಸರಿ ಪಡಿಸಬೇಕು ಎಂದು ಪ್ರಧಾನಿ ಕಚೇರಿಗೆ ನಮನ ವರ್ಷದ ಹಿಂದೆ  ಪತ್ರ ಬರೆದಿದ್ದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10ನೇ ತಗರತಿ ವಿದ್ಯಾರ್ಥಿನಿಯಾಗಿದ್ದ ನಮನ, ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರಧಾನಿ ಕಚೇರಿಯ ಸಿಬ್ಬಂದಿ ಈ ತಿಂಗಳಿನಲ್ಲಿ ಸ್ಪಂದಿಸಿದ್ದು ಚಿಕ್ಕಮಗಳೂರು ಡಿಸಿ ಕಚೇರಿಯಿಂದ ವಿವರಣೆ ಪಡೆದುಕೊಂಡಿದ್ದರು.

ಚಾರ್ಮಾಡಿ ಘಾಟ್ ನೆತ್ತಿಯ ಮೇಲೆ ಸಾಹಿತ್ಯದ ಕಸರತ್ತು!
 

"

click me!