ಸಿಎಂ ಆಗಿದ್ದು ಹೇಗೆ : ಸಿಕ್ರೇಟ್ ಬಿಚ್ಚಿಟ್ಟ ಹೆಚ್ ಡಿಕೆ

Published : Oct 17, 2018, 10:12 PM IST
ಸಿಎಂ ಆಗಿದ್ದು ಹೇಗೆ : ಸಿಕ್ರೇಟ್ ಬಿಚ್ಚಿಟ್ಟ ಹೆಚ್ ಡಿಕೆ

ಸಾರಾಂಶ

ಈಗ ಮೈತ್ರಿ ಸರ್ಕಾರದಿಂದ ಹೆಚ್.ಡಿ. ಕುಮಾರ ಸ್ವಾಮಿ ಭೇಟಿ ನೀಡಿದ್ದು, ಅಷ್ಟೇ ಅಲ್ಲದೆ  ನಾನು ಈ ಹಿಂದೆ ತಲಕಾವೇರಿಗೆ ಬಂದು ಹೋಗಿದ್ದರಿಂದಲ್ಲೇ ಸಿಎಂ ಆಗಿದ್ದೇನೆ ಎಂದು ತಮ್ಮ ದೈವ ಸಿಕ್ರೇಟ್ ಬಿಚ್ಚಿಟ್ಟಿದ್ದಾರೆ.

ಮಡಿಕೇರಿ[ಅ.17]: ತಲಕಾವೇರಿಗೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೇವೆ ಎಂದು ಇದುವರೆಗೂ ರಾಜ್ಯದ ಯಾವುದೇ ಸಿಎಂ ಬಾಗಮಂಡಲಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಇಂದು ಸಿಎಂ ಕುಮಾರಸ್ವಾಮಿ ಕಾವೇರಿ ತೀರ್ಥೋದ್ಭವದಲ್ಲಿ ಭಾಗಿಯಾಗುವ ಮೂಲಕ ತಲತಲಾಂತರದ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ.

ಚಾಮರಾಜನಗರ, ತಲಕಾವೇರಿಗೆ ಹೋದರೆ ಸಿಎಂ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಡ್ಯಭಾವನೆ ಇಂದಿಗೂ ರಾಜಕಾರಣಿಗಳಲ್ಲಿ ಇದೆ. ಕೆಲವು ಮುಖ್ಯಮಂತ್ರಿಗಳು ಆ ಸ್ಥಳಗಳಿಗೆ ಹೋಗಿ ಕಾಕತಾಳಿಯವೋ ಎಂಬಂತೆ ಅಧಿಕಾರ ಕಳೆದುಕೊಂಡಿದ್ದು ಉಂಟು. ಮತ್ತೂ ಕೆಲವರು ಆ ಕಡೆ ತಲೆಯೇ ಹಾಕಿರಲಿಲ್ಲ. ಮೊದಲ ಬಾರಿಗೆ ಚಾಮರಾಜನಗರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಮೌಡ್ಯ ಮುರಿದಿದ್ದರು. ಅಲ್ಲದೆ 5 ವರ್ಷ ಅಧಿಕಾರ ಪೂರೈಸಿದ್ದರು. ಈಗ ಮೈತ್ರಿ ಸರ್ಕಾರದಿಂದ ಹೆಚ್.ಡಿ. ಕುಮಾರ ಸ್ವಾಮಿ ಭೇಟಿ ನೀಡಿದ್ದು, ಅಷ್ಟೇ ಅಲ್ಲದೆ  ನಾನು ಈ ಹಿಂದೆ ತಲಕಾವೇರಿಗೆ ಬಂದು ಹೋಗಿದ್ದರಿಂದಲೇ ಸಿಎಂ ಆಗಿದ್ದೇನೆ ಎಂದು ತಮ್ಮ ದೈವ ಸಿಕ್ರೇಟ್ ಬಿಚ್ಚಿಟ್ಟಿದ್ದಾರೆ.

ತಲಕಾವೇರಿ ತೀರ್ಥೋದ್ಬವ
ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿಂದು ಕರುನಾಡಿನ ಜೀವನದಿ ಕಾವೇರಿಯ ತೀರ್ಥೋದ್ಭವವಾಯಿತು. ತುಲಾ ಸಂಕ್ರಮಣ ಕಾಲದಲ್ಲಿ ತೀರ್ಥರೂಪದಲ್ಲಿ ಕಾವೇರಿ ಉಗಮವಾಯ್ತು. ಭಾರೀ ಜಲಪ್ರಳಯದಿಂದ ತತ್ತರಿಸಿದ್ದ ಕೊಡಗಿನಲ್ಲಿ ಇಂದು ತೀರ್ಥೋದ್ಭವದ ಸಂಭ್ರಮ ಮನೆ ಮಾಡಿತ್ತು. ಬ್ರಹ್ಮ ಕುಂಡಿಕೆಯಿಂದ ತೀರ್ಥ ರೂಪದಲ್ಲಿ ಹುಕ್ಕಿಬರುವ, ಕಾವೇರಿಯನ್ನು ನೋಡಲು ಸಹಸ್ರಾರು ಜನರು ತಲಕಾವೇರಿಯಲ್ಲಿ ಜಮಾಯಿಸಿದ್ದರು. 

ಸಂಜೆ 6:43ರ ತುಲಾ ಸಂಕ್ರಮಣ ಕಾಲದಲ್ಲಿ ತೀರ್ಥೋದ್ಭವವಾಯಿತು. ಪುಣ್ಯ ನದಿ ಕಾವೇರಿಯ ಮಂಗಳ ತೀರ್ಥ ಪಡೆಯಲು ಭಕ್ತಾಧಿಗಳು ಬಿಂದಿಗೆ ಹಿಡಿದು ತಲಕಾವೇರಿಗೆ ಆಗಮಿಸಿದ್ದು ಸಾಮಾನ್ಯವಾಗಿತ್ತು. ತಲಕಾವೇರಿಯ ಪ್ರದಾನ ಅರ್ಚಕ ನಾರಾಯಣಾಚಾರ್  ನೇತೃತ್ವದಲ್ಲಿ 25 ಅರ್ಚಕರ ವೃಂದ ತೀರ್ಥೋದ್ಭವ ಪೂಜೆಯನ್ನು ಸಾಂಗವಾಗಿ ನೆರವೇರಿಸಲಾಗಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ