
ಬೆಂಗಳೂರು(ಫೆ.02): ಡಬ್ಬಿಂಗ್ ಚಿತ್ರಗಳ ವಿರುದ್ಧ ಮತ್ತೆ ಹೋರಾಟ ಶುರುವಾಗಿದೆ. ದೊಡ್ಡ ಹೋರಾಟದ ಸೂಚನೆನೂ ನೀಡಿದ್ದಾರೆ. ಪ್ರೆಸ್ ಕ್ಪಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನವರಸ ನಾಯಕ ಜಗ್ಗೇಶ್ ಡಬ್ಬಿಂಗ್ ಚಿತ್ರ ರಿಲೀಸ್'ನ್ನು ಖಂಡಿಸಿದ್ದಾರೆ. ಮಾರ್ಚ್ -3 ರಂದು ಡಬ್ಬಿಂಗ್ ಚಿತ್ರ ರಿಲೀಸ್ ಆದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ನಾಡು ಡಬ್ಬಿಂಗ್ ವಿರೋಧಿಸುತ್ತದೆ. ಆದರೆ ಈಗ ಕಾನೂನು ರೀತಿ ಅದನ್ನ ತಡೆಯೋಕೆ ಆಗೋದಿಲ್ಲ. ಆದರೂ,ಡಬ್ಬಿಂಗ್ ಚಿತ್ರದ ವಿರುದ್ಧ ಹೋರಾಟದ ಕಹಳೆ ಮೊಳಗುತ್ತಿದೆ. ಚಂದನವನದ ತಾರೆಯರು ಸಜ್ಜಾಗಿ ನಿಂತಿದ್ದಾರೆ. ಡಬ್ಬಿಂಗ್ ವಿರುದ್ಧ ವಾಟಾಳ್ ನಾಗರಾಜ್ ಟೊಂಕ ಕಟ್ಟಿ ನಿಂತಿದ್ದಾರೆ. ಕಾವಲುಗಾರನಂತೆ ಕನ್ನಡವನ್ನ ಕಾಪಾಡೋ ಕೆಲಸ ಮಾಡ್ತಿದ್ದಾರೆ. ಅನಕೃ,ರಾಜ್ ಕುಮಾರ್ ರಂತಹ ಮಹಾನ್ ವ್ಯಕ್ತಿಗಳೊಟ್ಟಿಗೆ ಡಬ್ಬಿಂಗ್ ವಿರುದ್ಧ ಹೋರಾಟ ನಡೆಸಿದವರು ಈಗ ಮತ್ತೆ ರೊಚ್ಚಿಗೆದ್ದಿದ್ದಾರೆ.
ಮಾರ್ಚ್-3 ರಂದು ತಮಿಳು ನಟ ಅಜಿತ್ ಅಭಿನಯದ ಎನ್ನೈ ಅರಿಂದಾಳ್ ಚಿತ್ರ, ಕನ್ನಡದಲ್ಲಿ ಡಬ್ ಆಗಿ ಸತ್ಯದೇವ್ ಐಪಿಎಸ್ ಅಂತ ರಿಲೀಸ್ ಮಾಡಲು ಮುಂದಾಗಿದ್ದಾರೆ. ಈ ವಿಷಯ ತಿಳಿದ ಹಿನ್ನೆಲೆಯಲ್ಲಿ ಮತ್ತೆ ಕನ್ನಡ ಹೋರಾಟಗಾರರು, ಕನ್ನಡದ ನಟರು ಹೋರಾಟಕ್ಕೆ ಧುಮುಕಿದ್ದಾರೆ.
ಮಾರ್ಚ್- 6 ರಂದು ಈ ಕುರಿತಂತೆ ಬೆಂಗಳೂರಿನ ವುಡ್ಲ್ಯಾಂಡ್ ಹೋಟೆಲ್ ನಲ್ಲಿ ಸಭೆ ನಡೆಯಲಿದೆ. ಅದರಲ್ಲಿ ಇತರ ಕಲಾವಿದರೂ ಮತ್ತು ಹೋರಾಟಗಾರರು ಭಾಗಿ ಆಗಲಿದ್ದಾರೆ. ಅಂದು ತೆಗೆದುಕೊಳ್ಳುವ ಇನ್ನಷ್ಟು ನಿರ್ಧಾರಗಳು ಹೋರಾಟಕ್ಕೆ ಮತ್ತಷ್ಟು ತುಂಬಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.