ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ: ಶೌಚಕ್ಕೆ ತೆರಳಿದ್ದ ಬಾಲಕ ರಾಜಕಾಲುವೆಗೆ ಬಿದ್ದು ಸಾವು

Published : Mar 02, 2017, 03:27 AM ISTUpdated : Apr 11, 2018, 12:48 PM IST
ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ: ಶೌಚಕ್ಕೆ ತೆರಳಿದ್ದ ಬಾಲಕ ರಾಜಕಾಲುವೆಗೆ ಬಿದ್ದು ಸಾವು

ಸಾರಾಂಶ

ಅದು ಇನ್ನೂ ಜಗತ್ತು ಏನೆಂದು ಅರಿಯದ ಕಂದಮ್ಮ. ಆದರೆ ವಿಧಿ ಆ ಪುಟ್ಟ ಜೀವದ ಜೊತೆ ಆಟ ಆಡಿದೆ. ಆಟ ಆಡಲು ಅಂತ ಹೋದ ಆ ಕಂದ ಹೋಗಿದ್ದು ಮಾತ್ರ ಸಾವಿನ ಮನೆಗೆ. ಇದಕ್ಕೆ ಕಾರಣವಾಗಿದ್ದು ಮಾತ್ರ ಬಿಬಿಎಂಪಿಯ ದಿವ್ಯ ನಿರ್ಲಕ್ಷ್ಯ.

ಬೆಂಗಳೂರು(ಮಾ.02): ಅದು ಇನ್ನೂ ಜಗತ್ತು ಏನೆಂದು ಅರಿಯದ ಕಂದಮ್ಮ. ಆದರೆ ವಿಧಿ ಆ ಪುಟ್ಟ ಜೀವದ ಜೊತೆ ಆಟ ಆಡಿದೆ. ಆಟ ಆಡಲು ಅಂತ ಹೋದ ಆ ಕಂದ ಹೋಗಿದ್ದು ಮಾತ್ರ ಸಾವಿನ ಮನೆಗೆ. ಇದಕ್ಕೆ ಕಾರಣವಾಗಿದ್ದು ಮಾತ್ರ ಬಿಬಿಎಂಪಿಯ ದಿವ್ಯ ನಿರ್ಲಕ್ಷ್ಯ.

ಈ ಪೋಟೋದಲ್ಲಿರುವ  ಬಾಲಕನ ಹೆಸರು ರಾಕೇಶ್. ವಯಸ್ಸು ಇನ್ನೂ ಏಳು ವರ್ಷ. ನಾಗದೇವನಹಳ್ಳಿ ರಾಜಾಕಾಲುವೆ  ಬಳಿ ಸಂಜೆ ೪:೩೦ ಸುಮಾರಿಗೆ ಶೌಚಕ್ಕೆ ತೆರಳಿದ್ದ . ಈ  ವೇಳೆ  ಕಾಲು ಜಾರಿ  ಕಾಲುವೆಗೆ ಬಿದ್ದು ಸಾವನಪ್ಪಿದ್ದಾನೆ. ೧ ಗಂಟೆಯಾದರೂ ಮಗ ಬರದ ಹಿನ್ನೆಲೆಯಲ್ಲಿ ರಾಕೇಶ್ ಕುಟುಂಬದವರು ಕಾಲುವೆ ಬಳಿ ಹೋಗಿ ನೋಡಿದಾಗ ರಾಕೇಶ್ ಕಾಲುವೆಗೆ ಬಿದ್ದಿರುವುದು ತಿಳಿದು ಬಂದಿದೆ.

ಮೃತ ಬಾಲಕ ರಾಕೇಶ್ ಮೂಲತಹ ಕಲಬುರಗಿಯ ಸೇಡಂ ನ ಹೊಡಗಿ ಗ್ರಾಮದ ನಿವಾಸಿಗಳಾದ ಭೀಮರಾಯ ಮತ್ತು ನಾಗಮ್ಮ ದಂಪತಿ ಮಗ. ಭೀಮರಾಯ  ಕುಟುಂಬ ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ ನಾಗದೇವನಹಳ್ಳಿಗೆ ಗಾರೆ ಕೆಲಸಕ್ಕಾಗಿ ಬಂದು ನೆಲೆಸಿತ್ತು. ನಿನ್ನೆ ರಾಜೇಶ್ ಸಾವನ್ನಪಿದ ಕಾಲುವೆಯ ಪಕ್ಕದ ರಸ್ತೆಯ ಮನೆಯೊಂದರಲ್ಲಿ ಗಾರೆ ಕೆಲಸ ಮಾಡುತಿದ್ರು..ಈ ವೇಳೆ ಆಟ ಆಡುತ್ತಿದ್ದ ರಾಕೇಶ್ ಕಾಲುವೆ ಬಳಿ ಶೌಚಕ್ಕೆ ಬಂದು ಕಾಲುವೆಗೆ ಬಿದ್ದು ಸಾವನ್ನಪ್ಪಿದ್ದಾನೆ.

ಇನ್ನು ಬಾಲಕನ ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಸ್ಪತ್ರೆಗೆ ಭೇಟಿ ನೀಡಿದ ಮೇಯರ್ ಪದ್ಮಾವತಿ ಮೃತನ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ 1 ಲಕ್ಷ ಪರಿಹಾರ, ಸ್ಲಮ್ ಬೋರ್ಡ್'ನಲ್ಲಿ ಮನೆ ನೀಡುವುದಾಗಿ ತಿಳಿಸಿದ್ದರು. ಇದಲ್ಲದೆ ಈ ರಾಜಕಾಲುವೆ ಒತ್ತುವರಿ ಆಗಿದ್ದು ಹೀಗಾಗಿಯೇ ಅಲ್ಲಿ ತಡೆಗೋಡೆಯನ್ನು ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ಸಬೂಬು ನೀಡಿದ್ದರು. ಅದೇನಿದ್ದರೂ ಬಿಬಿಎಂಪಿಯ ನಿರ್ಲಕ್ಷ್ಯವೋ..? ವಿಧಿಯ ಅಟ್ಟಹಾಸವೋ ಬಾಲಕ ಮಾತ್ರ ಸಾವಿನ ಮನೆ ಸೇರಿದ್ದು ವಿಪರ್ಯಾಸವೇ ಸರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ