ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ ಅಮೂಲ್ಯ!

Published : Feb 23, 2017, 01:12 PM ISTUpdated : Apr 11, 2018, 12:37 PM IST
ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ ಅಮೂಲ್ಯ!

ಸಾರಾಂಶ

ನಟಿ ಅಮೂಲ್ಯಾ ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ತನ್ನ ಜೀವನಸಂಗಾತಿಯನ್ನ ಆಯ್ಕೆ ಮಾಡಿಕೊಂಡಿರೋ ಅಮೂಲ್ಯ ಜಗದೀಶ್ ಜೊತೆ ಮಾರ್ಚ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. 

ಬೆಂಗಳೂರು (ಫೆ.23): ನಟಿ ಅಮೂಲ್ಯಾ ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ತನ್ನ ಜೀವನಸಂಗಾತಿಯನ್ನ ಆಯ್ಕೆ ಮಾಡಿಕೊಂಡಿರೋ ಅಮೂಲ್ಯ ಜಗದೀಶ್ ಜೊತೆ ಮಾರ್ಚ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. 

ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯಾಗೆ ಕಂಕಣಬಲ ಒಲಿದು ಬಂದಿದೆ. ಶ್ರಾವಣಿ ಸುಬ್ರಮಣ್ಯ ಚೆಲುವೆ ಅಮೂಲ್ಯಾ ಆರ್ ಆರ್ ನಗರದ ಮಾಜಿ ಕಾರ್ಪೊರೇಟರ್ ರಾಮಚಂದ್ರ ಅವರ ಪುತ್ರ ಜಗದೀಶ್​ರ ಜೊತೆ ಹಸೆಮಣೆ ಏರಲಿದ್ದಾರೆ. ಮಾರ್ಚ್ 6ಕ್ಕೆ  ರಾಜರಾಜೇಶ್ವರಿ ನಗರದಲ್ಲಿ ನಿಶ್ಚಿತಾರ್ಥ ನಡೆಯಲಿದ್ದು  ಇಂದು ಗುಡ್ಡಹಳ್ಳಿಯ ಅಮೂಲ್ಯ ನಿವಾಸದಲ್ಲಿ ಹುಡುಗಿ ನೋಡೋ ಶಾಸ್ತ್ರ ನೆರವೇರಿದೆ.

ನಟಿ ಅಮೂಲ್ಯಗೆ ಜಗದೀಶ್​ರ ಪರಿಚಯ ಮಾಡಿಸಿದ್ದು ಶಿಲ್ಪಾ ಗಣೇಶ್. ಅವರೇ ಮುಂದೆ ನಿಂತು ಎರಡೂ ಕುಟುಂಬದ ಜೊತೆ ಈ ಮದುವೆ ಮಾತುಕತೆ ಮಾಡಿದ್ದಾರೆ. ಅಮೂಲ್ಯಾ ತಾಯಿ ವಿಜಯಲಕ್ಷ್ಮೀ ಮತ್ತು ಸೋದರ ದೀಪಕ್​ ಮದುವೆ ವಿಚಾರವನ್ನ ಖಚಿತಪಡಿಸಿದ್ದಾರೆ.  ಅಮೂಲ್ಯಾ ಮದುವೆಯಾಗಲಿರೋ ಜಗದೀಶ್ ಲಂಡನ್ನಲ್ಲಿ ಎಂಬಿಎ ಮುಗಿಸಿದ್ದಾರೆ. ಆರ್ ಆರ್ ನಗರದ ನಿವಾಸಿಯಾಗಿರೋ ಮಾಜಿ ಕಾರ್ಪೊರೇಟರ್ ರಾಮಚಂದ್ರ ಅವರ ಗೌಡರ ಮನೆ ಸೊಸೆಯಾಗಲಿಕ್ಕೆ ಅಮೂಲ್ಯ ಸಿದ್ಧವಾಗಿದ್ದಾರೆ.

ನಟಿ ಅಮೂಲ್ಯ ಬಿಕಾಂ ಮುಗಿಸಿದ್ದು, ಸದ್ಯ ಗಣೇಶ್ ಜೊತೆ ಮುಗುಳು ನಗೆ ಮತ್ತು ದುನಿಯಾ ವಿಜಿ ಅಭಿನಯದ ಮಾಸ್ತಿ ಗುಡಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮಾರ್ಚ್ 6ರಂದು ನಿಶ್ಚಿತಾರ್ಥ ನಡೆದ ನಂತರ ಮದುವೆಯ ಡೇಟ್ ಫಿಕ್ಸ್ ಮಾಡಲಿದ್ದಾರೆ. ಇಬ್ಬರದ್ದೂ ಗೌಡರ ಸಂಪ್ರದಾಯವಾಗಿದ್ದು  ಪರಸ್ಪರ ಸಂತೋಷದಿಂದ ಈ ಮದುವೆಗೆ ಒಪ್ಪಿಕೊಂಡಿದ್ದಾರೆ. ಚೆಲುವಿನ ಚಿತ್ತಾರದ ಹುಡುಗಿ ತನ್ನ ಗಜಕೇಸರಿಯನ್ನ ಹುಡುಕಿಕೊಂಡಾಗಿದ್ದು ಶೀಘ್ರದಲ್ಲೆ ಮದುವೆಯಾಗಲಿದ್ದಾರೆ.

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೈಂಗಿಕ ಕಿರುಕುಳದ ಆರೋಪದ ನಂತರ ವಿದ್ಯಾರ್ಥಿ ಸಾವು: 4ನೇ ಮಹಡಿಯಿಂದ ಕೆಳಗೆ ಹಾರಿರುವ ಶಂಕೆ
ಹೊಸ ವರ್ಷದ ರಾತ್ರಿ ಬೆಂಗಳೂರಲ್ಲಿ ಪ್ರಯಾಣಕ್ಕೆ ವಿಶೇಷ ಬಸ್‌ ವ್ಯವಸ್ಥೆ! ಎಲ್ಲಿಂದ? ಎಲ್ಲಿಗೆ?