ಕೊಡಗಿನ ಕಣ್ಣೀರಿಗೆ ಪ್ರಕಾಶ್ ರೈ ಸ್ಪಂದನೆ

Published : Aug 19, 2018, 08:32 PM ISTUpdated : Sep 09, 2018, 09:32 PM IST
ಕೊಡಗಿನ ಕಣ್ಣೀರಿಗೆ ಪ್ರಕಾಶ್ ರೈ ಸ್ಪಂದನೆ

ಸಾರಾಂಶ

ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಕೊಡಗು ಸಂತ್ರಸ್ತರಿಗೆ 5 ಲಕ್ಷ ರೂ. ನೆರವು ನೀಡಿದ್ದಾರೆ. ಮೈಸೂರಿನ ಸಂಘಟನೆಗಳ ಮೂಲಕ ಪರಿಹಾರ ಹಣ ತಲುಪಿಸಿದ್ದಾರೆ.

ಬೆಂಗಳೂರು[ಆ.19]: ನೆರೆಗೆ ತತ್ತರಿಸಿರುವ ಕಾಫಿ ನಾಡು ಕೊಡಗಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಜನ ಸಾಮಾನ್ಯರಿಂದ ಒಳಗೊಂಡು ಸಮಾಜದ ವಿವಿಧ ಸ್ತರದ ಪ್ರಮುಖರು ಕೂಡ ತಮ್ಮ ತನು ಮನ ಧನ ಸಹಾಯ ಮಾಡುತ್ತಿದ್ದಾರೆ.

ಇಂದು ದಕ್ಷಿಣ ಭಾರತದ ಖ್ಯಾತ ಚಿತ್ರನಟ ಪ್ರಕಾಶ್ ರೈ ಕೊಡಗು ಸಂತ್ರಸ್ತರಿಗೆ 5 ಲಕ್ಷ ರೂ. ನೆರವು ನೀಡಿದ್ದಾರೆ. ಮೈಸೂರಿನ ಸಂಘಟನೆಗಳ ಮೂಲಕ ಪರಿಹಾರ ಹಣ ತಲುಪಿಸಿದ್ದಾರೆ. ಮುಂದಿನ ದಿನಗಳಲ್ಲಿ ನಿರಾಶ್ರಿತರಿಗೆ ನೆರವಾಗುವುದರ ಜೊತೆ ನೆರೆ ಪೀಡಿತ ಪ್ರದೇಶಗಳ ಪುನರ್ವಸತಿಗೆ ನೆರವಿನ ಭರವಸೆ ನೀಡಿದ್ದಾರೆ. ಸಾರ್ವಜನಿಕರಿಗೂ ಕೊಡಗು ಹಾಗೂ ಕೇರಳದ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದು ಈ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್'ನಲ್ಲಿ ಬರೆದುಕೊಂಡಿದ್ದಾರೆ.

ನಟ ಯಶ್ ಕೂಡ ತಮ್ಮ ಯಶಮಾರ್ಗ ಸಂಘಟನೆಯ ಮೂಲಕ ಕೊಡಗಿನ ಸಂತ್ರಸ್ತರಿಗೆ  ಪರಿಹಾರ ಸಾಮಗ್ರಿಯನ್ನು ತಲುಪಿಸಿದ್ದಾರೆ. ಕಳೆದ ಮೂರು ದಿನಗಳಿಂದ ಸಂಘಟನೆಯ ಸದಸ್ಯರು ನೆರೆಪೀಡಿತ ಪ್ರದೇಶದಲ್ಲಿ ಬೀಡುಬಿಟ್ಟಿದ್ದು ಪರಿಹಾರ ಕೇಂದ್ರದಲ್ಲಿರುವ ಸಾರ್ವಜನಿಕರಿಗೆ  ನೆರವು ನೀಡುತ್ತಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯತ್ನಾಳ್ ಭಾಷಣಕ್ಕೆ ಟಾಂಗ್ ಕೊಡಲು ಹೋಗಿ ಯಡವಟ್ಟು ಮಾಡಿಕೊಂಡ ಸಚಿವ ಸಂತೋಷ್ ಲಾಡ್!
ಸವಣೂರು ಘಟನೆ ಕಾಂಗ್ರೆಸ್ ಓಲೈಕೆ ರಾಜಕಾರಣದ ಪ್ರತಿಬಿಂಬ, ರಾಜ್ಯದಲ್ಲಿ ಪೊಲೀಸರ ನಿಷ್ಕ್ರಿಯತೆ ಬಗ್ಗೆಯೂ ಸಂಸದ ಬೊಮ್ಮಾಯಿ ಕಿಡಿ