
ಚೆನ್ನೈ(ಆ.19): ಪ್ರವಾಹಪೀಡಿತ ಕೇರಳದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಇಸ್ರೊದ ಐದು ಉಪಗ್ರಹಗಳು ಪ್ರಮುಖ ಪಾತ್ರ ವಹಿಸುತ್ತಿವೆ.
ಪ್ರವಾಹ ಸ್ಥಿತಿಗತಿಯ ನಿಗಾವಹಿಸುವ ಮತ್ತು ಪರಿಹಾರ ಕಾರ್ಯಾಚರಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ಉಪಗ್ರಹಗಳು ನೆರವಾಗುತ್ತಿವೆ. ಒಶನ್‌ಸ್ಯಾಟ್-2, ರಿಸೋರ್ಸ್ ಸ್ಯಾಟ್-2, ಕಾರ್ಟೊ ಸ್ಯಾಟ್-2, ಕಾರ್ಟೊ ಸ್ಯಾಟ್-2ಎ, ಇನ್ ಸ್ಯಾಟ್ 3 ಡಿಆರ್ ಉಪಗ್ರಹಗಳು ಸೂಕ್ತ ಸಮಯದಲ್ಲಿ ವಾಸ್ತವಿಕ ಸ್ಥಿತಿಗತಿಗಳ ಚಿತ್ರಗಳನ್ನು ತೆಗೆದು ಕಳಿಸುತ್ತಿವೆ.
ಈ ಚಿತ್ರ ಸಹಿತ ಮಾಹಿತಿಗಳನ್ನು ಆಧರಿಸಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಲಾಗುತ್ತಿದೆ
ಈ ಉಪಗ್ರಹಗಳು ನೀಡುವ ಡೇಟಾ ಆಧರಿಸಿ ಪ್ರವಾಹಕ್ಕೆ ಸಂಬಂಧಿಸಿದ ಮುನ್ನೆಚ್ಚರಿಕೆ , ಮಳೆಯ ಬಳಿಕ ಮುಳುಗಡೆಯಾಗಬಹುದಾದ ಪ್ರದೇಶಗಳು ಮತ್ತು ಹವಾಮಾನದ ವಿವರಗಳನ್ನು ಪ್ರಕಟಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಉಪಗ್ರಹಗಳು ನೀಡುವ ಡೇಟಾ ಹೈದರಾಬಾದ್‌ನಲ್ಲಿರುವ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್‌ನ ಡಿಸಿಷನ್ ಸಪೋರ್ಟ್ ಸೆಂಟರ್‌ನಲ್ಲಿ ಸಂಗ್ರಹಗೊಂಡಿರುತ್ತದೆ. ಅದನ್ನು ನಿಯಮಿತವಾಗಿ ಇಸ್ರೊ ಕೇಂದ್ರದಲ್ಲಿ ಪ್ರಸಾರ ಮಾಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.