
ಮೈಸೂರು, [ಅ. 05] : ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಗ್ರಾವೆಲ್ ಫೆಸ್ಟ್ ಆಟೋಕ್ರಾಸ್ ರೇಸ್ ಸ್ಪರ್ಧೆಯಲ್ಲಿ ನಟ ದರ್ಶನ್ ಭಾಗವಹಿಸುತ್ತಿಲ್ಲ.
ನಟ ದರ್ಶನ್ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಗ್ರಾವೆಲ್ ಫೆಸ್ಟ್ ಆಟೋಕ್ರಾಸ್ ರೇಸ್ ಭಾಗವಹಿಸುತ್ತಿಲ್ಲ ಎಂದು ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಆಪ್ ಮೈಸೂರು ಸ್ಪಷ್ಟ ಪಡಿಸಿದೆ.
ನಟ ದರ್ಶನ್ ಹೋಲ್ಕ್ಸ್ ವ್ಯಾಗನ್ ಕಾರ್ನಲ್ಲಿ ಸುಮಾರು 10 ದಿನಗಳ ಕಾಲ ಪ್ರಾಕ್ಟೀಸ್ ಮಾಡಿದ್ದರು. ಅಲ್ಲದೇ ಅಪಘಾತವಾದ ಮರುದಿನವೇ ಕಾರ್ ರೇಸ್ನಲ್ಲಿ ಭಾಗವಹಿಸಬಹುದಾ? ಎಂದು ವೈದ್ಯರ ಬಳಿ ಕೇಳಿದ್ದರು. ಆದರೆ, ಇದಕ್ಕೆ ವೈದ್ಯರು ದರ್ಶನ್ಗೆ ರೆಸ್ಟ್ ಮಾಡಲು ತಿಳಿಸಿದ್ದರು.
ದರ್ಶನ್ ಗೆ ಒಂದು ಕಾನೂನು, ಸಾಮಾನ್ಯರಿಗೆ ಇನ್ನೊಂದು ಕಾನೂನಾ?
ಈ ಹಿನ್ನೆಲೆಯಲ್ಲಿ ದರ್ಶನ್ ರೇಸ್ನಲ್ಲಿ ಭಾಗವಹಿಸುತ್ತಿಲ್ಲ. ಸದ್ಯ ಕಾರ್ ರೇಸ್ ಸ್ಪರ್ಧೆಗಳಿಗೆ ಪ್ರೊತ್ಸಾಹಿಸಲು ನಟ ದರ್ಶನ್ ಬರಲಿದ್ದಾರೆ ಎಂದು ಆಟೋ ಮೋಟಿವ್ ಸ್ಪೋರ್ಟ್ಸ್ ಕ್ಲಬ್ ಆಪ್ ಮೈಸೂರು ತಿಳಿಸಿದೆ.
ಅಕ್ಟೋಬರ್ 7 ರಂದು ಲಲಿತ್ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಕಾರ್ ರೇಸ್ ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಒಟ್ಟು 90 ಚಾಲಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.