
ಕೊಪ್ಪಳ[ಮಾ. 28] ಐತಿಹಾಸಿಕ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ ನಡೆಯುವಾಗ ರಥದ ಇರುಸು ಮುರಿದಿರುವ ಘಟನೆ ಬುಧವಾರ ನಡೆದಿದ್ದು ಯಾವುದೆ ಅಪಾಯ ಸಂಭವಿಸಿಲ್ಲ.
ಸರಿಯಾಗಿ 4 ಗಂಟೆಗೆ ಆರಂಭವಾದ ರಥೋತ್ಸವವು ಪಾದಗಟ್ಟಿ ತಲುಪುವ ಮುನ್ನವೇ ನಡು ಬೀದಿಯಲ್ಲಿರುವಾಗ ರಥದ ಎಡಭಾಗದ ಗಾಲಿ ತೋಡಿಸಲಾಗಿರುವ ಇರುಸು ಮುರಿದಿದೆ. ರಥದ ಇರುಸು ಮುರಿದಿರು ಸುದ್ದಿ ತಿಳಿದ ದೇವಸ್ಥಾನ ಅಧಿಕಾರಿಗಾಳು ಹಾಗೂ ಪೋಲೀಸ್ ಅಧಿಕಾರಿಗಾಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.
ಇರುಸು ಮುರಿದ ಪರಿಣಾಮ ಯಾವುದೇ ಹಾನಿಯಾಗಿಲ್ಲ. ಘಟನೆಗೆ ಏನು ಕಾರಣ ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.