
ಬೆಂಗಳೂರು [ಜು.22] : ರಾಜ್ಯ ರಾಜಕೀಯದಲ್ಲಿ ವಿಪ್ಲವ ಮುಂದುವರಿದಿದೆ. ಮೈತ್ರಿ ಪಾಳಯ ಇಂದು ವಿಶ್ವಾಸ ಮತ ಯಾಚನೆ ಮಾಡುವ ಸಾಧ್ಯತೆ ಇದ್ದು, ಸರ್ಕಾರ ಅಳಿವು, ಉಳಿವಿನ ಬಗ್ಗೆ ಶಂಕೆ ಇದೆ.
ಕಳೆದ ಎರಡು ದಿನಗಳ ಹಿಂದೆ ವಿಧಾನಸೌಧಕ್ಕೆ ಆಗಮಿಸಿ ಮತ್ತೆ ವಾಪಸ್ ತೆರಳಲು ಯತ್ನಿಸಿದ್ದ ಕಂಪ್ಲಿ ಶಾಸಕ ಗಣೇಶ್ ಇಂದು ಬಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಲಿಗೆ ಎರಗಿದ್ದಾರೆ.
ಇನ್ನು ಇತ್ತ ರೆಬೆಲ್ ನಾಯಕರೂ ಇಂದೂ ಕೂಡ ಗೈರಾಗಿದ್ದು, ಕೊನೆಯ ಹಂತದಲ್ಲಿ ಯತ್ನವನ್ನು ಮೈತ್ರಿ ನಾಯಕರು ಮುಂದುವರಿಸಿದ್ದಾರೆ. ಆದರೆ ಬಿಗಿ ಪಟ್ಟು ಹಿಡಿದು ಕುಳಿತಿರುವ ಅತೃಪ್ತರು ವಿಶ್ವಾಸಮತಕ್ಕೆ ಆಗಮಿಸುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇತ್ತ ಬಿಜೆಪಿ ನಾಯಕರು ಸರ್ಕಾರ ಮೈತ್ರಿ ಸರ್ಕಾರ ಉರುಳುವ ಭರವಸೆಯಲ್ಲಿದ್ದು, ರಚನೆ ಮಾಡುವ ವಿಶ್ವಾಸ ಹೊಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.