
ಹೈದರಾಬಾದ್(ಜೂ.01]: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಸರ್ಕಾರಕ್ಕೆ ಇಂದಿಗೆ ನಾಲ್ಕು ವರ್ಷ ತುಂಬಲಿದೆ. ಇಂತಹ ಸಂದರ್ಭದಲ್ಲಿ ದೇಶದ ಟಾಪ್ 10 ರೈತ ಸ್ನೇಹಿ ರಾಜ್ಯಗಳಲ್ಲಿ ತೆಲಂಗಾಣವೂ ಸ್ಥಾನ ಪಡೆಯುವ ಮೂಲಕ ರಾವ್ ಸರ್ಕಾರದ ಸಾಧನೆಗಳು ಮೆಚ್ಚುಗೆಗೆ ಪಾತ್ರವಾಗಿವೆ. ಸ್ವತಃ ರೈತ ಕುಟುಂಬದಿಂದ ಬಂದಿರುವ ಸಿಎಂ ರಾವ್ ಹಲವಾರು ರೈತಸ್ನೇಹಿ ಯೋಜನೆಗಳ ಮೂಲಕ, ರೈತರನ್ನು ಕಾಪಾಡಿದ್ದಾರೆ. ರೈತರ ಆತ್ಮಹತ್ಯೆ ತಡೆ, ಮಾರುಕಟ್ಟೆಯಲ್ಲಿ ದಲ್ಲಾಳಿಗಳ ವಂಚನೆ ತಡೆ, ಬೆಳೆ ವಿಮೆ, ಬೆಳೆ ಸಬ್ಸಿಡಿ, ಲಾಭದಾಯಕ ಬೆಳೆ ಬೆಳೆಯಲು ಪ್ರೋತ್ಸಾಹಕ ರಾವ್ ಸರ್ಕಾರದ ಅಲ್ಪಾವಧಿ ಸಾಧನೆ.
ರೈತರಿಗೆ ದಿನದ 24 ಗಂಟೆಯೂ ಉಚಿತ ವಿದ್ಯುತ್, 1 ಲಕ್ಷ ರು. ವರೆಗಿನ ಸಾಲ ಮನ್ನಾ, ರೈತ ಬಂಧು ಯೋಜನೆಗಳು ಯಶಸ್ವಿಯಾಗಿವೆ. ನೀತಿ ಆಯೋಗದ ಕೃಷಿ ಮಾರುಕಟ್ಟೆ ಮತ್ತು ರೈತ ಸ್ನೇಹಿ ಸುಧಾರಣಾ ಸೂಚ್ಯಂಕದಲ್ಲಿ ತೆಲಂಗಾಣಕ್ಕೆ 9ನೇ ಸ್ಥಾನ ಲಭ್ಯವಾಗಿದೆ.
ದೇಶದಲ್ಲೇ ವಾರ್ಷಿಕ ಬಜೆಟ್‌ನಲ್ಲಿ ಶೇ.26ರಷ್ಟು ಮೊತ್ತ ಕೃಷಿಗೆ ಮೀಸಲಿಟ್ಟ ಮೊದಲ ರಾಜ್ಯ ತೆಲಂಗಾಣ. ರೈತರಿಗೆ ಟ್ರಾಕ್ಟರ್ ಖರೀದಿಗೆ ಶೇ.50 ಸಬ್ಸಿಡಿ ಮತ್ತು ಸಾಗಾಟ ತೆರಿಗೆ ರದ್ದು, ರೈತರಿಗೆ 5 ರು. ಬೆಲೆಯಲ್ಲಿ ಆರೋಗ್ಯದಾಯಕ ಆಹಾರ ಪೂರೈಸುವ ಯೋಜನೆ ರಾಜ್ಯದಲ್ಲಿ ಜಾರಿಯಲ್ಲಿದೆ. ಆತ್ಮಹತ್ಯೆಗೈದ ರೈತ ಕುಟುಂಬಕ್ಕೆ 6 ಲಕ್ಷ ರು. ಪರಿಹಾರ, ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ವಿತರಣೆಯಲ್ಲಿ ಸಮರ್ಪಕ ಕಾರ್ಯ ನಿರ್ವಹಿಸಿ ರಾವ್ ಸರ್ಕಾರ ರೈತಸ್ನೇಹಿ ಎನಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.